T20 World Cup ನೆಟ್ ಸೆಷನ್ ವೇಳೆ ಪಾಕ್ ಆಟಗಾರ ಶಾನ್ ಮಸೂದ್ ತಲೆಗೆ ಚೆಂಡು ಬಡಿದಿದೆ.
ಅ,23ರಂದು ಭಾರತ ವಿರುದ್ಧದ ಮಹಾ ಸಮರಕ್ಕೆ ಪಾಕಿಸ್ತಾನ ಸಜ್ಜಾಗುತ್ತಿತ್ತು. ಪಾಕ್ ಆಟಗಾರರು ಎಂಸಿಜೆ ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದರು.
ಚೆಂಡಿನ ಏಟಿಗೆ ಕುಸಿದು ಬಿದ್ದ ಶಾನ್ ಅವರನ್ನು ಸಹ ಆಟಗಾರರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ.
ಸಹ ಆಟಗಾರ ಮೊಹ್ಮದ್ ನವಾಜ್ ಹೊಡೆದ ಚೆಂಡು ಶಾನ್ ಮಸೂದ್ ತಲೆಗೆ ಬಡಿಯಿತು ಎಂದು ತಿಳಿದು ಬಂದಿದೆ.
ಟೀಮ್ ಇಂಡಿಯಾ ವಿರುದ್ಧದ ಪಂದ್ಯದಕ್ಕೂ ಮುನ್ನ ಈ ಘಟನೆ ನಡೆದಿರೋದು ಪಾಕ್ ತಂಡಕ್ಕೆ ದೊಡ್ಡ ತಲೆ ನೋವಾಗಿದೆ.
ಹೆಚ್ಚಿನ ಸ್ಕಾನಿಂಗ್ಗಾಗಿ ಶಾನ್ ಮಸೂದ್ ಅವರನ್ನು ಒಳಪಡಿಸಲಾಗಿದೆ. ಮಸೂದ್ ಅವರ ಬಲ ಭಾಗದ ತಲೆಗೆ ಚೆಂಡು ಬಡಿದಿದೆ ಎಂದು ತಿಳಿದು ಬಂದಿದೆ.
ಕಳೆದ ತಿಂಗಳು ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಮೂರನೆ ಕ್ರಮಾಂಕದಲ್ಲಿ ಶಾನ್ ಮಸೂದ್ ಬ್ಯಾಟಿಂಗ್ ಮಾಡಿದ್ದರು.
ಪಾಕ್ ಪರ ಶಾನ್ ಮಸೂದ್ 12 ಟಿ20 ಪಂದ್ಯಗಳನ್ನು ಆಡಿದ್ದು 2 ಅರ್ಧ ಶತಕ ಸಿಡಿಸಿದ್ದು 125.00 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಮೂರನೆ ಕ್ರಮಾಂಕದಲ್ಲಿ ಆಡಲು ಫಾಕರ್ ಜಮಾನ್ ಜೊತೆ ಪೈಪೋಟಿ ನಡೆಸುತ್ತಿದ್ದಾರೆ.