ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಅನಿರೀಕ್ಷಿತಾ ಫಲಿತಾಂಶಗಳು ಬಂದಿವೆ. ಇದೀಗ ಎರಡು ಬಾರಿ ಚಾಂಪಿಯನ್ ವೆಸ್ಟ್ಇಂಡೀಸ್ ಐರ್ಲೆಂಡ್ ವಿರುದ್ಧ 9 ವಿಕೆಟ್ಗಳ ಅಂತರದಿಂದ ಸೋತು ಟೂರ್ನಿಯಿಂದ ಹೊರಬಿದ್ದಿದೆ.
ಐರ್ಲೆಂಡ್ ವಿರುದ್ಧ ಹೀನಾಯ ಸೋತ ನಂತರ ವಿಂಡೀಸ್ ತಂಡದ ನಾಯಕ ನಿಕೊಲೊಸ್ ಪೂರಾನ್ ಗಳಗಳನೆ ಅತ್ತುಬಿಟ್ಟಿದ್ದಾರೆ. ವಿಂಡೀಸ್ ತಂಡ ಟಿ20 ಫಾರ್ಮೆಟ್ ನ ಪವರ್ ಹೌಸ್. ಇದಲ್ಲದೇ ಎರಡು ಬಾರಿ ಚಾಂಪಿಯನ್ನಾಗಿರುವ ತಂಡ. ಚುಟುಕು ಆವೃತ್ತಿಯಲ್ಲಿ ಒಳ್ಳೆಯ ದಾಖಲೆ ಹೊಂದಿರುವ ವಿಂಡೀಸ್ ಬೇಗೆನೆ ಟೂರ್ನಿಯಿಂದ ನಿರ್ಗಮಿಸಿದೆ.
ಯುವ ತಂಡದೊಂದಿಗೆ ಕಣಕ್ಕಿಳಿದಿದ್ದ ವಿಂಡೀಸ್ ತಂಡ ಸುನಿಲ್ ನರೈನ್ ಹಾಗೂ ಸ್ಫೋಟಕ ಬ್ಯಾಟರ್ ಆ್ಯಂಡ್ರೆ ರಸೆಲ್ ಅವರುಗಳನ್ನು ಕೈಬಿಟ್ಟಿತ್ತು.
ಪಂದ್ಯ ಮುಗಿದ ಬಳಿಕ ಕಣ್ಣೀರಿಟ್ಟ ನಾಯಕ ನಿಕೊಲೊಸ್ ಪೂರಾನ್, ತುಂಬ ಕಠಿಣವಾಗಿತ್ತು. ಚೆನ್ನಾಗಿ ಬ್ಯಾಟಿಂಗ್ ಮಾಡಲಿಲ್ಲ. 145 ರನ್ ಡಿಫೆಂಡ್ ಮಾಡುವುದು ಕಷ್ಟವಾಗಿತ್ತು. ಐರ್ಲೆಂಡ್ ತಂಡಕ್ಕೆ ಅಭಿನಂದನೆಗಳು.
ಬ್ರಾಂಡನ್ ಕಿಂಗ್ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ಅಲ್ಜಾರಿ ಚೆನ್ನಾಗಿ ಬೌಲಿಂಗ್ ಮಾಡಿರು. ತವರಿಗೆ ಬೇಗ ಹೋಗುತ್ತಿರುವುದು ನಿರಾಸೆ ತಂದಿದೆ. ಇನ್ನು ಒಂದು ಕಾದು ನೋಡುತ್ತೇವೆ ಎಂದು ನಿಕೊಲೊಸ್ ಪೂರಾನ್ ಹೇಳಿದರು.