
ಏಷ್ಯಾ ಚಾಂಪಿಯನ್ ಶ್ರೀಲಂಕಾ ತಂಡ ಐರ್ಲೆಂಡ್ ವಿರುದ್ಧ 9 ವಿಕೆಟ್ಗಳ ಸುಲಭ ಗೆಲುವು ದಾಖಲಿಸಿದೆ. ಅಂಕಪಟ್ಟಿಯಲ್ಲಿ ಎರಡನೆ ಸ್ಥಾನಕ್ಕೇರಿದೆ.
ಹೋಬಾರ್ಟ್ ನಲ್ಲಿ ನಡೆದ ಗುಂಪು 1ರ 15ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 128 ರನ್ ಕಲೆ ಹಾಕಿತು. ಶ್ರೀಲಂಕಾ ತಂಡ 15 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತು.
129 ರನ್ ಗುರಿ ಬೆನ್ನತ್ತಿದ ಲಂಕಾ ತಂಡಕ್ಕೆ ಓಪನರ್ ಗಳಾದ ಕುಸಾಲ ಮೆಂಡಿಸ್ ಹಾಗೂ ಧನಂಜಯ ಡಿಸಿಲ್ವಾ ಮೊದಲ ವಿಕಟ್ಗೆ 63 ರನ್ಗಳ ಭರ್ಜರಿ ಆರಂಭ ನೀಡಿದರು.

ಕುಸಾಲ ಮೆಂಡೀಸ್ 43 ಎಸೆತದಲ್ಲಿ 5 ಬೌಂಡರಿ 3 ಸಿಕ್ಸರ್ ಸಿಡಿಸಿ ಅಜೇಯ 68 ರನ್ ಗಳಿಸಿದರು. ಬಿರುಸಿನ ಬ್ಯಾಟಿಂಗ್ ಮಾಡಿದ ಕುಸಾಲ್ ಮೆಂಡೀಸ್ 37 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ಜೊತೆಗೆ ಎರಡನೆ ಬಾರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.