T20 World Cup ಹ್ಯಾಟ್ರಿಕ್ ಪಡೆದು ಇತಿಹಾಸ ನಿರ್ಮಿಸಿದ ಜೋಶ್ ಲಿಟ್ಲ್
ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ ಐರ್ಲೆಂಡ್ ತಂಡ ಸೋಲು ಕಂಡಿದ್ದರೂ ತಂಡದ ಎಡಗೈ ವೇಗಿ ಜೋಶ್ ಲಿಟ್ಲ್ ಇತಿಹಾಸದ ನಿರ್ಮಿಸಿದ್ದಾರೆ.
ಅಡಿಲೇಡ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಜೋಸ್ ಲಿಟ್ಲ್ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 19ನೇ ಓವರ್ನಲ್ಲಿ ದಾಳಿಗಿಳಿದ ಜೋಶ್, ನಾಯಕ ಕೇನ್ ವಿಲಿಯಮ್ಸನ್, ಜೇಮ್ಸ್ ನಿಶಾಮ್ ಹಾಗೂ ಮಿಚೆಲ್ ಸ್ಯಾಂಟ್ನರ್ ಅವರನ್ನು ಪೆವಿಲಿಯನ್ಗೆ ಅಟ್ಟಿದರು.
ಸ್ಯಾಂಟ್ನರ್ ಔಟಾದಾಗ ನ್ಯೂಜಿಲೆಂಡ್ ತಂಡ ರಿವ್ಯುವ್ಗೆ ಹಾಕಿತು ಆದರೆ ಅದು ಪ್ರಯೋಜನವಾಗಲಿಲ್ಲ. ಜೋಶ್ ಲಿಟ್ಲ್ ಹ್ಯಾಟ್ರಿಕ್ ವಿಕೆಟ್ ಪಡೆದು ಸ್ಮರಣಿಯವಾಗಿಸಿಕೊಂಡರು.
ಈ ಮೂಲಕ ಕರ್ಟಿಸ್ ಕ್ಯಾಂಫರ್ ನಂತರ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಎರಡನೆ ಬೌಲರ್ ಎನಿಸಿದರು.
ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದು. ಆರನೆ ಹ್ಯಾಟ್ರಿಕ್ ಆಗಿದೆ. 2007ರ ಚೊಚ್ಚಲ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಬ್ರೇಟ್ ಲೀ ಮೊದಲ ಬಾರಿಗೆ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದರು.