
ಎರಡು ಬಾರಿ ಚಾಂಪಿಯನ್ ವೆಸ್ಟ್ಇಂಡೀಸ್ ತಂಡವನ್ನು ಐರ್ಲೆಂಡ್ ತಂಡ 9 ವಿಕೆಟ್ ಗಳ ಅಂತರದಿಂದ ಗೆದ್ದು ಹೊರ ಹಾಕಿದೆ. ಈ ಗೆಲುವಿನೊಂದಿಗೆ ಐರ್ಲೆಂಡ್ ಸೂಪರ್ 12 ಹಂತವನ್ನು ಪ್ರವೇಶಿಸಿದೆ.
ಹೋಬಾರ್ಟ್ ಮೈದಾನದಲ್ಲಿ ನಡೆದ ಬಿ ಗುಂಪಿನ 11ನೇ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ಇಂಡೀಸ್ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 146 ರನ್ ಕಲೆ ಹಾಕಿತು.ಐರ್ಲೆಂಡ್ ತಂಡ 17.3 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತು.
147 ರನ್ ಗುರಿ ಬೆನ್ನತ್ತಿದ ಐರ್ಲೆಂಡ್ ಪರ ಓಪನರ್ಗಳಾದ ಪೌಲ್ ಸ್ಟಿರ್ಲಿಂಗ್ ಹಾಗೂ ಆ್ಯಂಡಿ ಬಾಲ್ಬಿರೀನ್ ಮೊದಲ ವಿಕೆಟಗೆ 73 ರನ್ ಸೇರಿಸಿದರು. ಪೌಲ್ ಸ್ಟಿರ್ಲಿಂಗ್ ಅಜೇಯ 66 ರನ್ (48 ಎಸೆತ, 6 ಬೌಂಡರಿ, 2 ಸಿಕ್ಸರ್) ಸಿಡಿಸಿದರು. ಆ್ಯಂಡಿ ಬಾಲ್ಬಿರೀನ್ 37 ರನ್ ಚಚ್ಚಿದರು.ಲೊರಕಾನ್ ಟಕ್ಕರ್ ಅಜೇಯ 45 ರನ್ ಕಲೆ ಹಾಕಿದರು. ವಿಂಡೀಸ್ ಪರ ಅಖೀಲ್ ಹುಸೇನ್ 38 ರನ್ ನೀಡಿ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ವೆಸ್ಟ್ಇಂಡೀಸ್ ಕೈಲೆ ಮೇಯರ್ಸ್ 1, ಜಾನ್ಸನ್ ಚಾರ್ಲ್ಸ್ 24, ಎವಿನ್ ಲಿವೀಸ್ 13,ಬ್ರಾಂಡಾನ್ ಕಿಂಗ್ ಅಜೇಯ 62 (48 ಎಸೆತ,6 ಬೌಂಡರಿ 1 ಸಿಕ್ಸರ್), ನಾಯಕ ನಿಕೊಲೊಸ್ ಪೂರಾನ್ 13, ರೊವಮನ್ ಪೊವೆಲ್ 6, ಒಡಿಯಾನ್ ಸ್ಮಿತ್ ಅಜೇಯ 19 ರನ್ ಕಲೆ ಹಾಕಿದರು.

ಐರ್ಲೆಂಡ್ ಪರ ಗೆರಾತ್ ಗಿಲಾನಿ 16ಕ್ಕೆ 3 ವಿಕೆಟ್, ಸಿಮಿ ಸಿಂಗ್ 11ಕ್ಕೆ 1, ಮೆಕ್ ಕಾರ್ತಿ 33ಕ್ಕೆ 1 ವಿಕೆಟ್ ಪಡೆದರು. 3 ವಿಕೆಟ್ ಪಡೆದ ಗೆರಾತ್ ಗಿಲಾನಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.