ಚುಟುಕು ಮಹಾ ಸಮರಕ್ಕೆ ಟೀಮ್ ಇಂಡಿಯಾವನ್ನು (Team India) ಪ್ರಕಟಿಸಲಾಗಿದೆ (Announced). ಹೆಚ್ಚು ಅಚ್ಚರಿ ಇಲ್ಲದೆ ಒಂದೆರಡು ಬದಲಾವಣೆಗಳೊಂದಿಗೆ ಭಾರತ (India) ತಂಡ ಆಸ್ಟ್ರೇಲಿಯಾಕ್ಕೆ (Australia) ಪ್ರಯಾಣ ಬೆಳೆಸಲಿದೆ. 15 ಆಟಗಾರರ ಜೊತೆ 4 ಆಟಗಾರರನ್ನು ಸ್ಟ್ಯಾಂಡ್ ಬೈ (Stand by Players) ಆಗಿಯೂ ಹೆಸರಿಸಲಾಗಿದೆ.
ರೋಹಿತ್ ಶರ್ಮಾ (Rohit Sharma) ತಂಡದ ನಾಯಕನಾಗಿದ್ದಾರೆ. ಕೆ.ಎಲ್. ರಾಹುಲ್ (KL Rahul) ಉಪನಾಯಕನ ಪಟ್ಟ ಹೊಂದಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಸೂರ್ಯಕುಮಾರ್ ಯಾದವ್ (Surya Kumar Yadav) ಮತ್ತು ದೀಪಕ್ ಹೂಡ (Deepak Hooda) ಸೇರಿಕೊಂಡು ನಾಲ್ವರು ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ಗಳಿದ್ದಾರೆ. ರಿಷಬ್ ಪಂತ್ (Rishab Pant) ಮತ್ತು ದಿನೇಶ್ ಕಾರ್ತಿಕ್ (Dinesh Karthik) ವಿಕೆಟ್ ಕೀಪಿಂಗ್ ಬ್ಯಾಟರ್ಗಳು. ಹಾರ್ದಿಕ್ ಪಾಂಡ್ಯಾ (Hardik Pandya) ವೇಗದ ಬೌಲಿಂಗ್ ಆಲ್ರೌಂಡರ್ ಆದ್ರೆ, ರವಿಚಂದ್ರನ್ ಅಶ್ವಿನ್ (Ravichandran Ashwin), ಅಕ್ಸರ್ ಪಟೇಲ್ (Axar Patel) ಸ್ಪಿನ್ನಿಂಗ್ ಆಲ್ರೌಂಡರ್ಸ್. ಯಜುವೇಂದ್ರ ಚಹಲ್ ಸ್ಪಿನ್ ಸ್ಪೆಷಲಿಸ್ಟ್. ಜಸ್ಪ್ರಿತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಮತ್ತು ಅರ್ಶದೀಪ್ ಸಿಂಗ್ ವೇಗದ ಬೌಲಿಂಗ್ಗೆ ಇರುವ ಆಯ್ಕೆಯಾಗಿದೆ.
ಇವರ ಹೊತಾಗಿ ಭಾರತ ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯಿ ಮತ್ತು ದೀಪಕ್ ಚಹರ್ ಅವರನ್ನು ಸ್ಟ್ಯಾಂಡ್ ಬೈ ಆಗಿ ಆಯ್ಕೆ ಮಾಡಿದೆ. ಒಟ್ಟಿನಲ್ಲಿ ಬಲಿಷ್ಠ ತಂಡವನ್ನು ಕಟ್ಟಿ ವಿಶ್ವಕಪ್ ಆಸೆಯನ್ನು ಭಾರತ ಹುಟ್ಟಿಸಿದೆ.
ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಸ್ಟ್ಯಂಡ್ ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯಿ, ದೀಪಕ್ ಚಹರ್