T20 World Cup |ತಸ್ಕಿನ್ ಅಹಮದ್ ಮಾರಕ ದಾಳಿಯ ನೆರವಿನಿಂದ ಬಾಂಗ್ಲಾದೇಶ ತಂಡ ನೆದರ್ಲೆಂಡ್ ವಿರುದ್ಧ 9 ರನ್ಗಳ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಹೋಬರ್ಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತು. ನಿಗದಿತ 20 ಓವರ್ಗಳಲ್ಲಿ 135 ರನ್ ಗಳಿಸಿ ಆಲೌಟ್ ಆಯಿತು.
145 ರನ್ ಗುರಿ ಬೆನ್ನತ್ತಿದ ನೆದರ್ಲೆಂಡ್ ತಂಡ ತಂಡದ ಪರ ವಿಕ್ರಮ್ ಜೀತ್ 0, ಮ್ಯಾಕ್ಸ್ ಒಡೌದ್ 8, ಬಾಸ್ ಡಿ ಲೀಡೆ 0, ಕೊಲಿನ್ ಅಕರ್ಮನ್ 62 ರನ್, ಕೂಪರ್ 0, ನಾಯಕ ಸ್ಕಾಟ್ ಎಡ್ವರ್ಡ್ಸ್ 16 ರನ್, ಪೌಲ್ ವಾನ್ ಮೀಕೆರೆನ್ 24 ರನ್ ಕಲೆ ಹಾಕಿದರು. ಬಾಂಗ್ಲಾ ಪರ ತಸ್ಕಿನ್ ಅಹ್ಮದ್ 25ಕ್ಕೆ 4 ವಿಕೆಟ್, ಹಸನ್ ಮೊಹ್ಮದ್ 15ಕ್ಕೆ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಶಾಂಟೊ 25, ಸೌಮ್ಯ ಸರಕಾರ್ 14, ಶಕೀಬ್ ಅಲ್ ಹಸನ್ 7,ಅಫೀಫ್ ಹುಸೇನ್ 38, ನೂರುಲ್ ಹಸನ್ 13, ಮೊಸೆಡೆಕ್ ಹುಸೇನ್ 20 ರನ್ ಕಲೆ ಹಾಕಿದರು.
ನೆದರ್ಲೆಂಡ್ ಪರ ಮೀಕೆರೆನ್ 21ಕ್ಕೆ 2, ಬಾಸ್ ಡಿ ಲೀಡೆ 29ಕ್ಕೆ 2 ವಿಕೆಟ್ ಪಡೆದರು. ಬಾಂಗ್ಲಾ ವೇಗಿ ತಸ್ಕಿನ್ ಅಹ್ಮದ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.