Covid 19- ಸ್ಪಿನ್ನರ್ ಆ್ಯಡಾಮ್ ಜಾಂಪ ಹಾಗೂ ವಿಕೆಟ್ ಕೀಪರ್ ಮ್ಯಾಥೀವ್ ವೇಡ್ಗೆ ಕೊರೋನಾ ಸೋಂಕಿಗೆ ಗುರಿಯಾಗುತ್ತಿದ್ದಂತೆ ತಂಡದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದೆಂದು ಕೋಚ್ ಆಂಡ್ರೀವ್ ಮೆಕ್ ಡೋನಾಲ್ಡ್ ಆತಂಕ ವ್ಯಕ್ತಪಡಿದ್ದಾರೆ.
ತಂಡದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕುರಿತು ಮಾತನಾಡಿದ ಮೆಕ್ ಡೋನಾಲ್ಡ್ ತಂಡದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಬಹುದು.
ಶುಕ್ರವಾರದ ಪಂದ್ಯದಲ್ಲಿ ಮ್ಯಾಥೀವ್ ವೇಡ್ ಆಡಬೇಕಿತ್ತು. ವೈರಾಣುವಿನಿಂದ ಬೇರೆ ಬೇರೆ ರೀತಿಯಲ್ಲಿ ಸೋಂಕು ತಗಲುತ್ತದೆ. ಸೋಂಕು ತಗುಲಿದಾಗ ಜಾಂಪಾ ಆಡಲು ನಿರಾಕರಿಸಿದರು. ವೇಡ್ ಆಡಲು ಸಿದ್ಧ ಎಂದರು.
ಜಂಪಾ ಅವರನ್ನು ಪ್ರತ್ಯೇಕವಾಗಿ ಇಡಲಾಗಿದೆ. ಸಂಹವಾನವನ್ನು ಪ್ರತ್ಯೇಕವಾಗಿ ಮಾಡಬೇಕಾಗುತ್ತದೆ. ಎಲ್ಲಾ ತಂಡಗಳಿಗೂ ಸೋಂಕು ಭೀತಿ ಇದೆ ಎಂದರು.
ಆಸ್ಟ್ರೇಲಿಯಾ ಹೊರತುಪಡಿಸಿ ಐರ್ಲೆಂಡ್ ತಂಡದ ಜಾರ್ಜ್ ಡಾಕ್ರೆಲ್ ಅವರಿಗೆ ಸೋಂಕು ತಗಲಿತ್ತು. ಐಸಿಸಿ ಕೊರೋನಾ ಸೋಂಕಿತರಿಗೆ ಆಡಲು ಅವಕಾಶ ನೀಡಿದೆ.