ಐರ್ಲೆಂಡ್ ಹಾಗೂ ಅಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಉಭಯ ತಂಡಗಳಿಗೆ ಅಂಕಗಳನ್ನು ಹಂಚಲಾಗಿದೆ.
ಸೂಪರ್ 12 ಹಂತದಲ್ಲಿ ಒಂದೂ ಪಂದ್ಯವನ್ನು ಗೆಲ್ಲದ ಅಫ್ಘಾನಿಸ್ತಾನ ತಂಡಕ್ಕೆ ತನ್ನ ಎರಡನೆ ಪಂದ್ಯವೂ ಮಳೆಗೆ ಆಹುತಿಯಾಗಿದೆ.
ನಿನ್ನೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಕೂಡ ಮಳೆಯಿಂದಾಗಿ ರದ್ದಾಗಿತ್ತು.
ಗ್ರೂಪ್ 1ರ ಅಂಕಪಟ್ಟಿಯಲ್ಲಿ ಐರ್ಲೆಂಡ್ ಮೂರು ಪಂದ್ಯಗಳಿಂದ 3 ಅಂಕಗಳನ್ನು ಪಡೆದು ಎರಡನೆ ಸ್ಥಾನದಲ್ಲಿದೆ.
ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ ತಂಡ ಕೊನೆಯ ಸ್ಥಾನದಲ್ಲಿದೆ.
ಪಂದ್ಯ ಆಡದೇ ಇರುವುದಕ್ಕೆ ತುಂಬ ನಿರಾಸೆಯಾಗಿದೆ ಎಂದು ಉಭಯ ತಂಡಗಳ ನಾಯಕರು ಹೇಳಿದ್ದಾರೆ.
ಇನ್ನ ಬಹುನಿರೀಕ್ಷಿತಾ ಇಂಗ್ಲೆಂಡ್ ಮತ್ತು ಆತಿಥೇಯ ಆಸ್ಟ್ರೇಲಿಯಾ ನಡುವಿನ ಪಂದ್ಯ ಕೂಡ ಮಳೆಯಿಂದಾಗಿ ವಿಳಂಬವಾಗಿದೆ.