ಟಿ20 ವಿಶ್ವಕಪ್ನ 21ನೇ ಪಂದ್ಯದಲ್ಲಿ ಇಂದು ಅಫ್ಘಾನಿಸ್ತಾನ ತಂಡ ಕಳದ ಬಾರಿಯ ರನ್ನರ್ ಅಪ್ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಮೇಲ್ಬೊರ್ನ್ ಮೈದಾನದಲ್ಲಿ ನಡೆಯಲಿರುವ ಕದನದಲ್ಲಿ ಉಭಯ ತಂಡಗಳಿಂದ ಜಿದ್ದಾಜಿದ್ದಿನ ಕದನವನ್ನು ನಿರೀಕ್ಷಿಸಲಾಗಿದೆ. ಮೊದಲ ಪಂದ್ಯದಲ್ಲಿ ಕೇನ್ ಪಡೆ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಶುಭರಂಭ ಮಾಡಿತ್ತು.
ಕಿವೀಸ್ ಬ್ಯಾಟರ್ ಡೆವೊನ್ ಕಾನ್ವೆ ಅಜೇಯ 92 ರನ್ ಮತ್ತು ಟಿಮ್ ಸೌಥಿ ಹಾಗೂ ಮಿಚೆಲ್ ಸ್ಯಾಂಟ್ನರ್ ತಲಾ 3 ವಿಕೆಟ್ ಪಡೆದು ಮಿಂಚಿದ್ದರು.
ಇನ್ನು ಅಫ್ಘಾನಿಸ್ತಾನ ತಂಡ ತನ್ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 5 ವಿಕೆಟ್ಗಳಿಂದ ಸೋತಿತ್ತು. ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದರೂ ಬೌಲಿಂಗ್ನಲ್ಲಿ ಕಮಾಲ್ ಮಾಡಿತ್ತು.
ಈ ಪಂದ್ಯದಲ್ಲಿ ಆಫ್ಘಾನ್ ಬ್ಯಾಟಿಂಗ್ ಸುಧಾರಿಸಿಕೊಳ್ಳಬೇಕಿದೆ. ಜೊತೆಗೆ ಫೀಲ್ಡಿಂಗ್ ಕೂಡ ಸುಧಾರಿಸಿಕೊಳ್ಳಬೇಕಿದೆ.ಅಲೆಕ್ಸ್ ಹೇಲ್ಸ್ ಕೊಟ್ಟ ಎರಡು ಕ್ಯಾಚ್ ಅನ್ನು ಕೈಚೆಲ್ಲಿದರು.
ಈ ಆವೃತ್ತಿಯಲ್ಲಿ ಉಭಯ ತಂಡಗಳು ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದು ನ್ಯೂಜಿಲೆಂಡ್ ಗೆದ್ದುಕೊಂಡೊತ್ತು. ಇಂದಿನ ಪಂದ್ಯದಲ್ಲೂ ನ್ಯೂಜಿಲೆಂಡ್ ತಂಡ ಗೆಲ್ಲುವ ನೆಚ್ಚಿನ ತಂಡವಾಗಿದೆ. ಅಫ್ಘಾನಿಸ್ತಾನ ಒಂದು ಪಂದ್ಯವನ್ನು ಕೈಚೆಲ್ಲಿದ್ದು ಈ ಪಂದ್ಯವನ್ನು ಗೆಲ್ಲಲ್ಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ.