ಕರ್ಟಿಸ್ ಕ್ಯಾಂಫರ್ ಅವರ ಆಲ್ರೌಂಡ್ ಆಟದ ನೆರವಿನಿಂದ ಐರ್ಲೆಂಡ್ ತಂಡ ಸ್ಕಾಟ್ಲೆಂಡ್ ವಿರುದ್ಧ 6 ವಿಕೆಟ್ಗಳ ಗೆಲುವು ದಾಖಲಿಸಿದೆ. ಸೂಪರ್ 12 ರೇಸ್ ಅನ್ನು ಜೀವಂತವಾಗಿರಿಸಿಕೊಂಡಿದೆ.
ಹೋಬರ್ಟ್ ಮೈದಾನದಲ್ಲಿ ನಡೆದ ವಿಶ್ವಕಪ್ 7ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 176 ರನ್ ಕಲೆ ಹಾಕಿತು. ಐರ್ಲೆಂಡ್ ತಂಡ 19 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು.
177 ರನ್ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡ ಪರ ಪೌಲ್ ಸ್ಟಿರ್ಲಿಂಗ್ 8, ಆ್ಯಂಡಿ ಬಾಲ್ಬಿರಿನ್ 14, ಲೊರ್ಕಾನ್ ಟಕ್ಕರ್ 20, ಹ್ಯಾರಿ ಟೆಕ್ಟೊರ್ 14 ರನ್ ಕಲೆ ಹಾಕಿದರು.
61 ರನ್ಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಜೊತೆಗೂಡಿದ ಕರ್ಟಿಸ್ ಕ್ಯಾಂಫರ್ ಅಜೇಯ 72 (32 ಎಸೆತ, ಬೌಂಡರಿ 2 ಸಿಕ್ಸರ್) ಹಾಗೂ ಜಾರ್ಜ್ ಡಾಕ್ರೆಲ್ ಅಜೇಯ 39 ರನ್ ( 27 ಬೌಂಡರಿ, 4 ಬೌಂಡರಿ 1 ಸಿಕ್ಸರ್) ಗಳಿಸಿ 6 ಎಸೆತ ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು.
ಮೈಕಲ್ ಲೀಸ್ಕ್ 16 ಕ್ಕೆ 1,ಬ್ರಾಡ್ ವ್ಹೀಲ್ 25ಕ್ಕೆ 1, ಶಾಫ್ಯಾನ್ 32ಕ್ಕೆ 1, ಮಾರ್ಕ್ ವಾಟ್ 39ಕ್ಕೆ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಸ್ಕಾಟ್ಲೆಂಡ್ ಪರ ಜಾರ್ಜ್ ಮುನ್ಸೆ 1, ಮೈಕಲ್ ಜಾನ್ಸ್ 86 ರನ್ (55 ಎಸೆತ, 6 ಬೌಂಡರಿ, 4 ಸಿಕ್ಸರ್), ಮ್ಯಾಥೀವ್ ಕ್ರಾಸ್ 28, ನಾಯಕ ರಿಚೆಲ್ ಬೆರ್ರಿಂಗ್ಟನ್ 37 ರನ್, ಮೈಕಲ್ ಲೀಸ್ಕ್ ಅಜಯ 17 ರನ್ ಗಳಿಸಿದರು.
ಕರ್ಟಿಸ್ ಕ್ಯಾಂಫರ್ 9ಕ್ಕೆ 2 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.