T20 Wolrd Cup ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಶಾಕಿಂಗ್ ನ್ಯೂಸ್ ಕಾದಿದೆ.ಇಡೀ ಕ್ರಿಕೆಟ್ ಜಗತ್ತೆ ಕಾತರದಿಂದ ಕಾಯುತ್ತಿರುವ ಭಾರತ- ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನಕ್ಕೆ ಮಳೆ ಅಡ್ಡಿ ಮಾಡುವ ಸಾಧ್ಯತೆ ಹೆಚ್ಚಿದೆ.
ಆಸ್ಟ್ರೇಲಿಯಾ ಹವಾಮಾನ ಇಲಾಖೆ ಎಚ್ಚರಿಸಿದ್ದು ಬದ್ಧವೈರಿಗಳ ಕಾದಾಟಕ್ಕೆ ತಣ್ಣೀರೆರಿಚಿದಂತಾಗಿದೆ.
ಪಂದ್ಯಕ್ಕೂ ಮುನ್ನವೆ ಮೆಲ್ಬೊರ್ನ್ ಮೈದಾನದಲ್ಲಿ ಭಾರಿ ಮಳೆಯಾಗುತ್ತಿದೆ. ಪಂದ್ಯದ ದಿನ ಶೇ.80ರಷ್ಟು ಮಳೆ ಬೀಳುವ ಸಾಧ್ಯತೆ ಇದೆ.
15ರಿಂದ 20 ಕಿ.ಮೀ. ದಕ್ಷಿಣ ಈಶಾನ್ಯದ ಕಡೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬರೀ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಮಾತ್ರವಲ್ಲ ಅ.22ರಂದು ನಡೆಯಬೇಕಿರುವ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪಂದ್ಯಕ್ಕೂ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.
ಬುಧವಾರ ಬ್ರಿಸ್ಬೇನ್ ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯ ಕೂಡ ರದ್ದಾಗಿತ್ತು.
ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಹೊರತುಪಡಿಸಿ ಲೀಗ್ನಲ್ಲಿ ಮೀಸಲು ದಿನಗಳಿಲ್ಲ.