T20 Wolrd Cup- ಕ್ರಿಕೆಟ್ ಶಿಶಿ ಐರ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡ 35 ರನ್ಗಳ ಗೆಲುವು ದಾಖಲಿಸಿದೆ. ನ್ಯೂಜಿಲೆಂಡ್ ತಂಡ ಬಹುತೇಕ ಸೆಮಿಫೈನಲ್ಗೆ ತಲುಪಿದೆ.
35 ರನ್ಗಳ ಗೆಲುವು ದಾಖಲಿಸಲು ಕಾರಣರಾಗಿದ್ದು ನಾಯಕ ಕೇನ್ ವಿಲಿಯಮ್ಸನ್. ಪ್ರತಿಷ್ಠಿತ ಟೂರ್ನಿಯಲ್ಲಿ ಕೇನ್ ವಿಲಿಯಮ್ಸನ್ ಹೇಳಿಕೊಳ್ಳುವಂತಹ ಪ್ರದರ್ಶನ್ ನೀಡಿಲ್ಲ. ಆದರೆ ನಿರ್ಣಾಯಕ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇನ್ಸ ವಿಲಿಯಮ್ಸನ್ ನಾಯಕನ ಆಟವಾಡಿದರು. ಗೆಲ್ಲಲೇಬೇಕಾದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದರು.
ಐರ್ಲೆಂಡ್ ಬೌಲರ್ಗಳನ್ನೆ ಬೆಂಡೆತ್ತಿದ ನ್ಯೂಜಿಲೆಂಡ್ ನಾಯಕ 32 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.
ಕೇನ್ ವಿಲಿಯಮ್ಸನ್ ಒಟ್ಟು 35 ಎಸೆತದಲ್ಲಿ 5 ಬೌಂಡರಿ 3 ಸಿಕ್ಸರ್ 61 ರನ್ ಹೊಡೆದರು. 61 ರನ್ ಗಳಿಸಿದ್ದಾಗ ಲಿಟ್ಲ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ವಿಲಿಯಮ್ಸನ್ ಅವರ ಸೊಗಸಾದ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ 185 ರನ್ಗಳ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು.
ಕೇನ್ ವಿಲಿಯಮ್ಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.