T20 Wolrd Cup : ಟಿ20 ವಿಶ್ವಕಪ್ನ ಸೂಪರ್ 12ರ ಗ್ರೂಪ್ 2ರ ಪಂದ್ಯದಲ್ಲಿ ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ಧ ವೀರೋಚಿತ ಸೋಲು ಅನುಭವಿಸಿದೆ.
ಈ ಸೋಲು ರೋಹಿತ್ ಪಡೆಗೆ ಯಾವುದೇ ನಷ್ಟವಿಲ್ಲದಿದ್ದರೂ ಪಾಕಿಸ್ತಾನದ ಸೆಮಿಫೈನಲ್ ಕನಸು ಕಮರಿದೆ. ಇಷ್ಟದರೂ ಪಾಕ್ ಗೆ ಸೆಮಿಫೈನಲ್ ತಲುಪುವ ಅವಕಾಶವಿದೆ. ದಕ್ಷಿಣ ಆಫ್ರಿಕಾ ತಂಡದ ಫಲಿತಾಂಶಗಳನ್ನೆ ನೆಚ್ಚಿಕೊಳ್ಳಬೇಕಿದೆ.
ಅಂಕಪಟ್ಟಿಯಲ್ಲಿ ಸ್ಥಾನ ಪಡೆಯುವ ಮೊದಲೆರಡು ತಂಡಗಳು ಸೆಮಿಫೈನಲ್ಗೆ ಹೋಗಲಿದೆ. ಸೌತ್ ಆಫ್ರಿಕಾ 3 ಪಂದ್ಯಗಳಿಂದ 2ರಲ್ಲಿ ಗೆದ್ದು 1 ಪಂದ್ಯ ಡ್ರಾ ಆಗಿದ್ದು ಒಟ್ಟು 5 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿದೆ.
ಟೀಮ್ ಇಂಡಿಯಾ 3 ಪಂದ್ಯಗಳಿಂದ 2ರಲ್ಲಿ ಗೆದ್ದು 1ರಲ್ಲಿ ಸೋತು 4 ಅಂಕ ಪಡೆದು ಎರಡನೆ ಸ್ಥಾನದಲ್ಲಿದೆ. ಸದ್ಯಕ್ಕೆ ಈ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸುವ ನೆಚ್ಚಿನ ತಂಡಗಳಾಗಿವೆ. ರೋಹಿತ್ ಪಡೆ ಮುಂದಿನ ಎರಡು ಪಂದ್ಯಗಳನ್ನು ಗೆದ್ದರೆ 8 ಅಂಕಗಳೊಂದಿಗೆ ಸೆಮಿಫೈನಲ್ಗೆ ಲಗ್ಗೆ ಹಾಕಲಿದೆ. ಸೌತ್ ಆಫ್ರಿಕಾ ಮುಂದಿನ 2 ಪಂದ್ಯಗಳನ್ನು ಗೆದ್ದರೆ 9 ಅಂಕಗಳೊಂದಿಗೆ ಸೆಮಿಗೆ ಪ್ರವೇಶಪಡೆಯಲಿದೆ.
ಸೆಮಿ ಕನಸು ಕಾಣತ್ತಿರುವ ಪಾಕಿಸ್ತಾನ ತಂಡ ಮುಂದಿನ ಪಂದ್ಯವನ್ನು ಗೆಲ್ಲಬೇಕು. ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್ ವಿರುದ್ಧ ಸೋಲಬೇಕು. ಹೀಗಿದ್ದಲ್ಲಿ ಮಾತ್ರ ಪಾಕ್ಗೆ ಸೆಮಿಗೆ ಹೋಗುವ ಅವಕಾಶವಿದೆ.
ಪಾಕ್ ತಂಡ ಮುಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲುತ್ತದಯೇ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿದೆ.