
ಕ್ರಿಕೆಟ್ ಜಗತ್ತು ಕಾಯುತ್ತಿರುವ ಟಿ20 ವಿಶ್ವಕಪ್ಗೆ ಕೌಂಟ್ ಡೌನ್ ಶುರುವಾಗಿದೆ.
ಈ ಬಾರಿಯ ಟಿ20 ವಿಶ್ವಕಪ್ ಸೆಮಿಫೈನಲ್ಗೆ ಗ್ರೂಪ 1 ರಿಂದ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಪ್ರವೇಶಿಸಿವೆ. ಗ್ರೂಪ್ 2ರಿಂದ ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ತಂಡಗಳು ಎಂಟ್ರಿಕೊಟ್ಟಿವೆ.
ಈ ನಾಲ್ಕು ತಂಡಗಳ ಪೈಕಿ ಈ ಹಿಂದಿನ ಸೆಮಿಫೈನಲ್ ಗಳಲ್ಲಿ ಹೆಚ್ಚು ರನ್ ಹೊಡೆದ ಬ್ಯಾಟರ್ ಯಾರು ?
ಯಾರು ಹೆಚ್ಚು ರನ್ ಹೊಡೆದಿದ್ದು ಅಂತಾ ನೋಡಿದರೆ ಅದು ಕಿಂಗ್ ವಿರಾಟ್ ಕೊಹ್ಲಿ.
ರನ್ ಮಷೀನ್ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ನ ಸೆಮಿಫೈನಲ್ಗಳಲ್ಲಿ ರನ್ ಮಳೆ ಸುರಿಸಿದ್ದಾರೆ.
ಇದುವರೆಗೂ ಟಿ20 ವಿಶ್ವಕಪ್ ಸೆಮಿಫೈನಲ್ನ 3 ಇನ್ನಿಂಗ್ಸ್ ಗಳಿಂದ ವಿರಾಟ್ ಕೊಹ್ಲಿ 236 ರನ್ ಸಿಡಿಸಿದ್ದಾರೆ. 3 ಅರ್ಧ ಶತಕ ಸಿಡಿಸಿದ್ದಾರೆ. 238 ಸರಾಸರಿ ಹೊಂದಿದ್ದು 159.7 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಎರಡನೆ ಸ್ಥಾನದಲ್ಲಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ 5 ಇನ್ನಿಂಗಸ್ಗಳಿಂದ 134 ರನ್ ಹೊಡೆದಿದ್ದಾರೆ. 134 ಎವರೇಜ್ ಹೊಂದಿದ್ದಾರೆ. 147.3 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಮೂರನೆ ಅತಿ ಹೆಚ್ಚು ರನ್ ಹೊಡೆದವರು ನ್ಯೂಜಿಲೆಂಡ್ ಕೇನ್ ವಿಲಿಯಮ್ಸನ್ 3 ಇನ್ನಿಂಗ್ಸ್ ಗಳಿಂದ 122 ರನ್ ಗಳಿಸಿದ್ದಾರೆ. 1 ಅರ್ಧ ಶತಕ ಸಿಡಿಸಿದ್ದಾರೆ. 40.67 ಎವರೇಜ್ ಹೊಂದಿದ್ದಾರೆ. 140.2 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ 3 ಇನ್ನಿಂಗ್ಸ್ ಗಳಿಂದ 97 ರನ್ ಪೇರಿಸಿದ್ದು 48.5 ಎವರೇಜ್ ಹೊಂದಿದ್ದಾರೆ. 154 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ನ್ಯೂಜಿಲೆಂಡ್ ತಂಡದ ಆಲ್ರೌಂಡರ್ ಡ್ಯಾರಿಲ್ ಮಿಚೆಲ್ 2 ಪಂದ್ಯಗಳಿಂದ 83 ರನ್ ಹೊಡೆದಿದ್ದಾರೆ. 1 ಅರ್ಧ ಶತಕ ಸಿಡಿಸಿದ್ದು 83 ಸರಾಸರಿ ಹೊಂದಿದ್ದು150.9 ಸ್ಟ್ರೈಕ್ ರೇಟ್ ಹೊಂದಿದ್ದಾರೆ.