ಈ ಬಾರಿಯ ಟಿ20 ವಿಶ್ವಕಪ್ ಫೈನಲ್ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವುದನ್ನು ನಮ್ಮ ತಂಡ ತಪ್ಪಿಸಲು ಪ್ರಯತ್ನಿಸಲಿದೆ ಎಂದು ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ತಿಳಿಸಿದ್ದಾರೆ.
ವಿಶ್ವ ಕ್ರಿಕೆಟ್ನಲ್ಲಿ ಭಾರತ –ಪಾಕಿಸ್ತಾನ ಕದನ ಅತಿ ವೀಕ್ಷಿಸಲ್ಪಟ್ಟ ಕದನವಾಗಿದೆ. ಬದ್ಧ ವೈರಿಗಳ ಕಾದಾಟ ವೀಕ್ಷಣೆ ಹೆಚ್ಚಿದೆ.ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಭಾರತ- ಪಾಕಿಸ್ತಾನ ಮುಖಾಮುಖಿಯಾಗುವುದನ್ನು ನಮ್ಮ ತಂಡ ನೋಡಲು ಬಯಸುವುದಿಲ್ಲ. 2007ರ ರೀತಿಯಲ್ಲಿ ಮತ್ತೆ ನಡೆಯುವುದಿಲ್ಲ ಎಂದು ಭಾವಿಸಿರುವುದಾಗಿ ತಿಳಿಸಿದರು.
ಭಾರತ ತಂಡ ಬಲಿಷ್ಠವಾಗಿದೆ. ದೀರ್ಘ ಕಾಲದವರೆಗೆ ಸ್ಥಿರತೆ ಕಾಪಾಡಿಕೊಂಡು ಬಂದಿದ್ದಾರೆ. ಸಹಜವಾಗಿ ಗೇಮ್ನ ಆಳ ಹಾಗೂ ಪ್ರತಿಭೆ ಎರಡೂ ಇದೆ.
ತಂಡದಲ್ಲಿ ಒಳ್ಳೆಯ ಆಟಗಾರರಿದ್ದಾರೆ. ಭಾರತ ಕಠಿಣ ಪೈಪೋಟಿ ನೀಡಲಿದೆ ಎಂದು ನಾಯಕ ಬಟ್ಲರ್ ಹೇಳಿದ್ದಾರೆ.
ಬಹುತೇಕ ಮಾಜಿ ಕ್ರಿಕೆಟಿಗರು ಭಾರತ ಹಾಗೂ ಪಾಕಿಸ್ತಾನ ನಡುವೆ ಫೈನಲ್ ಪಂದ್ಯ ನಡೆಯಲಿದೆ ಎಂದು ಭವಿಷ್ಯಾ ನುಡಿದಿದ್ದಾರೆ.