ಕಾಂಗರು ನಾಡಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಸೆಮಿಫೈನಲ್ ಕದನಕ್ಕೆ ವೇದಿಕೆ ಸಜ್ಜಾಗಿದೆ.
ಬುಧವಾರ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ನ.10 ಭಾರತ ಮತ್ತು ಇಂಗ್ಲೆಂಡ್ ತಂಡಗಳು ಕಾದಾಟ ನಡೆಸಲಿವೆ.
ಈ ನಾಲ್ಕು ತಂಡಗಳ ಈ ಹಿಂದಿನ ನಾಕೌಟ್ ಹಂತದ ಸಾಧನೆ ನೋಡುವುದಾದರೆ.
ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ 5 ಪಂದ್ಯಗಳನ್ನಾಡಿದ್ದು 3ರಲ್ಲಿ ಗೆಲುವು ಕಂಡಿದೆ. 2 ಪಂದ್ಯಗಳನ್ನು ಸೋತಿದ್ದು ಶೇ.60ರಷ್ಟು ಗೆಲುವನ್ನು ಕಂಡಿದೆ.
ಟೀಮ್ ಇಂಡಿಯಾ 5 ಸೆಮಿಫೈನಲ್ ಪಂದ್ಯಗಳಿಂದ 3ರಲ್ಲಿ ಗೆದ್ದು 2 ಪಂದ್ಯಗಳನ್ನು ಸೋತಿದ್ದು ಶೇ. 60ರಷ್ಟು ಗೆಲುವು ಕಂಡಿದೆ.
ಪಾಕಿಸ್ತಾನ ತಂಡ 7 ಸೆಮಿಫೈನಲ್ ಪಂದ್ಯಗಳಿಂದ 3 ಪಂದ್ಯಗಳನ್ನು ಗೆದ್ದು 4 ಪಂದ್ಯಗಳನ್ನು ಕೈಚೆಲ್ಲಿದೆ. ಶೇ. 42.80 ಗೆಲುವು ಕಂಡಿದೆ.
ನ್ಯೂಜಿಲೆಂಡ್ ತಂಡ 4 ಪಂದ್ಯಗಳಿಂದ 1 ಒಂದು ಬಾರಿ ಗೆದ್ದು 3 ಬಾರಿ ಸೋಲು ಕಂಡಿದೆ. ಶೇ.25ರಷ್ಟು ಮಾತ್ರ ಗೆಲುವು ಕಂಡಿದೆ.

ಭಾರತ ಮತ್ತು ಇಂಗ್ಲೆಂಡ್ ತಂಡಗಳು ತಲಾ 5 ಸೆಮಿಫೈನಲ್ ಪಂದ್ಯಗಳನ್ನುಆಡಿದ್ದು 3 ಪಂದ್ಯಗಳನ್ನು ಸಮಾನವಾಗಿ ಗೆದ್ದಿವೆ. ಪಾಕಿಸ್ತಾನ ಕೂಡ 3 ಪಂದ್ಯಗಳನ್ನು ಗೆದ್ದಿದೆ ಆದರೆ 7 ಪಂದ್ಯಗಳನ್ನು ಆಡಿದೆ.ನ್ಯೂಜಿಲೆಂಡ್ ಸೆಮಿಯಲ್ಲಿ 1 ಬಾರಿ ಮಾತ್ರ ಗೆದ್ದಿದೆ.