ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವನ್ ಕುರಿತು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೌನವಹಿಸಿದ್ದಾರೆ.
ಅಡಿಲೇಡ್ನಲ್ಲಿ ಆಂಗ್ಲರ ವಿರುದ್ಧ ನಡೆಯುವ ಮಹಾ ಕದನದ ನಡೆಯಲಿದೆ. ರಿಷಬ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ನಡುವಿನ ಆಯ್ಕೆ ಕುರಿತು ನಾಯಕ ರೋಹಿತ್ ಶರ್ಮಾ, ಇಬ್ಬರು ತಂಡಕ್ಕೆ ಲಭ್ಯರಿದ್ದಾರೆ ಎಂದು ಜಾಣ ಉತ್ತರ ನೀಡಿದ್ದಾರೆ.
ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ರಿಷಬ್ ಪಂತ್ ಆಡಿದ್ದರು. ಕಾರ್ತಿಕ್ ಸೂಪರ್ 12 ಹಂತದ ನಾಲ್ಕು ಪಂದ್ಯಗಳನ್ನು ಆಡಿದ್ದರು.
ಈ ಪ್ರವಾಸದಲ್ಲಿ ರಿಷಬ್ ಪಂತ್ ಒಬ್ಬರೆ ಅಡಲಿಲ್ಲ. ಪರ್ತ್ ನಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನು ಆಡಿದ್ದಾರೆ. ನಂತರ ರಿಷಬ್ ಆಡಿಲ್ಲ,ಗೇಮ್ ಟೈಮ್ ಮಿಸ್ ಮಾಡಿಕಂಡಿದ್ದರಿಂದ ನಾವು ಅವರಿಗೆ ಸಮಯ ಕೊಟ್ಟೆವು.
ಬೇರೆ ಆಯ್ಕೆ ಮಾಡಿದೆವು.ಸೆಮಿಫೈನಲ್ ಅಥವಾ ಫೈನಲ್ನ್ ನಲ್ಲಿ ಬದಲಾವಣೆ ಮಾಡಬೇಕಿದ್ದಲ್ಲಿ ಮಾಡುತ್ತೇವೆ ಎಂದು ನಾಯಕ ರೋಹಿತ್ ಶರ್ಮಾ ಸುಳಿವು ನೀಡಿದ್ದಾರೆ.