ದೀಪ್ತಿ ಶರ್ಮಾ ಅವರ ಸ್ಪಿನ್ ಮ್ಯಾಜಿಕ್ ನೆರವಿನಿಂದ ಭಾರತ ವನಿತೆಯರ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ ಟಿ20 ತ್ರಿಕೋನ ಸರಣಿಯಲ್ಲಿ ಫೈನಲ್ ತಲುಪಿದೆ.
ಫೈನಲ್ನಲ್ಲಿ ಹರ್ಮನ್ ಪ್ರೀತ್ ಪಡೆ ಆತಿಥೇಯ ದ.ಆಫ್ರಿಕಾ ತಂಡವನ್ನು ಎದುರಿಸಲಿದೆ.
ಇಲ್ಲಿನ ಈಸ್ಟ್ ಲಂಡನ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ವನಿತಯರು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿತು. ಭಾರತ 13.5 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿತು.
ಭಾರತ ಪರ ದೀಪ್ತಿ ಶರ್ಮಾ ರಶಾಡಾ ವಿಲಿಯಮ್ಸ್ (8) ಮತ್ತು ಕ್ಯಾಂಪ್ಬೆಲ್ (0), ಶಬಿಕಾ ಗಜನಬಿ ಅವರುಗಳ ವಿಕೆಟ್ ಪಡೆದು ವಿಂಡೀಸ್ ಕುಸಿತಕ್ಕೆ ಕಾರಣರಾದರು. ಪೂಜಾ ವಸ್ತ್ರಕಾರ್ 19ಕ್ಕೆ 2 ವಿಕೆಟ್ ಪಡೆದರು. ವಿಂಡೀಸ್ ಪರ ಹಾಲೇ ಮ್ಯಾಥ್ಯೂಸ್ 34 ರನ್ ಹೊಡೆದು ತಂಡದ ಪರ ಗರಿಷ್ಠ ರನ್ ದಾಖಲಿಸಿದರು.
ಭಾರತ ಪರ ಜೆಮಿಮ್ಮಾ ರಾಡ್ರಿಗಸ್ ಅಜೇಯ 42 ರನ್, ಹರ್ಮನ್ ಪ್ರೀತ್ ಕೌರ್ ಅಜೇಯ 32 ರನ್ ಹೊಡೆದರು.