T20 Ranking ಟೀಮ್ ಇಂಡಿಯಾದ ಮಿಸ್ಟರ್ 360 ಸೂರ್ಯಕುಮಾರ್ ಐಸಿಸಿ ಟಿ20 ರಾಂಕಿಂಗ್ನಲ್ಲಿ ನಂ.1 ಪಟ್ಟ ಅಲಂಕರಿಸಿದ್ದಾರೆ.
ಬುಧವಾರ ಐಸಿಸಿ ಬಿಡುಗಡೆ ಮಾಡಿರುವ ಟಿ20 ರಾಂಕಿಂಗ್ನಲ್ಲಿ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನ ಏರಿದ್ದಾರೆ. ಸೂರ್ಯ ಕುಮಾರ್ ಪಾಕ್ ತಂಡದ ಬ್ಯಾಟರ್ ಮೊಹ್ಮದ್ ರಿಜ್ವಾನ್ ಅವರನ್ನು ಹಿಂದಿಕ್ಕಿದರು. ಟಿ20 ರಾಂಕಿಂಗ್ನಲ್ಲಿ ನಂ.1 ಸ್ಥಾನ ಪಡೆದ ಎರಡನೆ ಭಾರತೀಯ ಬ್ಯಾಟರ್ ಆಗಿದ್ದಾರೆ.
ಕಳೆದ ಮಾರ್ಚ್ನಲ್ಲಿ ಸೂರ್ಯಕುಮಾರ್ ಚುಟುಕು ಆವೃತ್ತಿಯಲ್ಲಿ ಬೇಗನೆ ರಾಂಕಿಂಗ್ನಲ್ಲಿ ಏರಿಕೆ ಕಂಡರು. 37 ಇನ್ನಿಂಗ್ಸ್ ಗಳಿಂದ 11 ಅರ್ಧ ಶತಕಗಳನ್ನು ಸಿಡಿಸಿದರು.
ಅಗ್ರ ಸ್ಥಾನ ಪಡೆದಿರುವ ಸೂರ್ಯಕುಮಾರ್ ಒಟ್ಟು 863 ಅಂಕಗಳನ್ನು ಪಡೆದಿದ್ದಾರೆ. ಎರಡನೆ ಸ್ಥಾನದಲ್ಲಿರುವ ಪಾಕ್ ತಂಡದ ಮೊಹ್ಮದ್ ರಿಜ್ವಾನ್ 842 ರನ್ ಕಲೆ ಹಾಕಿದ್ದಾರೆ. ನ್ಯೂಜಿಲೆಂಡ್ ತಂಡದ ಡೆವೊನ್ ಕಾನ್ವೆ 792 ಅಂಕ ಪಡೆದು ಮೂರನೆ ಸ್ಥಾನದಲ್ಲಿದ್ದಾರೆ.