ಭಾರತ-ನ್ಯೂಜಿಲೆಂಡ್ ನಡುವಣ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ತಂಡ 177 ರನ್ ಗಳ ಗುರಿಯನ್ನು ಹಾರ್ದಿಕ್ ಪಾಂಡ್ಯ ಬಳಗಕ್ಕೆ ನೀಡಿದೆ.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಫಿನ್ ಅಲೇನ್, ಡೇವೊನ್ ಕಾನ್ವೆ 4.2 ಓವರ್ ಗಳಲ್ಲಿ 43 ರನ್ ಗಳ ಜತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ವಾಶಿಂಗ್ಟನ್ ಸುಂದರ್ ಸಫಲರಾದರು.
ಇದೇ ಓವರ್ ನ ಆರನೇ ಎಸೆತದಲ್ಲಿ ವಾಶಿಂಗ್ಟನ್ ಸುಂದರ್ ಮತ್ತೊಬ್ಬ ಬ್ಯಾಟರ್ ಗೆ ಖೆಡ್ಡಾ ತೋಡಿದರು.
ಮೂರನೇ ವಿಕೆಟ್‍್ಗೆ ಗ್ಲೇನ್ ಫಿಲಿಪ್ಸ್ ಹಾಗೂ ಕಾನ್ವೆ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 47 ಎಸೆತಗಳಲ್ಲಿ 60 ರನ್ ಸೇರಿಸಿತು. ಗ್ಲೇನ್ ಫಿಲಿಪ್ಸ್ 17 ರನ್ ಬಾರಿಸಿ ಔಟ್ ಆದರು.

ಡೇವೊನ್ ಕಾನ್ವೆ 35 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ 52 ರನ್ ಸಿಡಿಸಿತು. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಡೇರಿಲ್ ಮಿಚೆಲ್ ಅಜೇಯ 59 ರನ್ ಸಿಡಿಸಿ ತಂಡದ ಮೊತ್ತ ಹಿಗ್ಗಿಸಿದರು.

ಟೀಮ್ ಇಂಡಿಯಾ ಪರ ವಾಶಿಂಗ್ಟನ್ ಸುಂದರ್ 2, ಅರ್ಷದೀಪ್ ಸಿಂಗ್, ಶಿವಂ ಮಾವಿ, ಕುಲ್ದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು.
T20, India, New Zealand, Ranchi, Washington Sundar