ಟೀಮ್ ಇಂಡಿಯಾದ ಮೇಲ್ಪಂಕ್ತೀಯ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲವಾದ ಪರಿಣಾಮ ಟೀಮ್ ಇಂಡಿಯಾ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದೆ. ಈ ಮೂಲಕ ನ್ಯೂಜಿಲೆಂಡ್ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಫಿನ್ ಅಲೇನ್, ಡೇವೊನ್ ಕಾನ್ವೆ 4.2 ಓವರ್ ಗಳಲ್ಲಿ 43 ರನ್ ಗಳ ಜತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ವಾಶಿಂಗ್ಟನ್ ಸುಂದರ್ ಸಫಲರಾದರು.
ಇದೇ ಓವರ್ ನ ಆರನೇ ಎಸೆತದಲ್ಲಿ ವಾಶಿಂಗ್ಟನ್ ಸುಂದರ್ ಮತ್ತೊಬ್ಬ ಬ್ಯಾಟರ್ ಗೆ ಖೆಡ್ಡಾ ತೋಡಿದರು.
ಮೂರನೇ ವಿಕೆಟ್ ಗ್ಲೇನ್ ಫಿಲಿಪ್ಸ್ ಹಾಗೂ ಕಾನ್ವೆ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 47 ಎಸೆತಗಳಲ್ಲಿ 60 ರನ್ ಸೇರಿಸಿತು. ಗ್ಲೇನ್ ಫಿಲಿಪ್ಸ್ 17 ರನ್ ಬಾರಿಸಿ ಔಟ್ ಆದರು.
ಡೇವೊನ್ ಕಾನ್ವೆ 35 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ 52 ರನ್ ಸಿಡಿಸಿತು. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಡೇರಿಲ್ ಮಿಚೆಲ್ ಅಜೇಯ 59 ರನ್ ಸಿಡಿಸಿ ತಂಡದ ಮೊತ್ತ ಹಿಗ್ಗಿಸಿದರು.
ಟೀಮ್ ಇಂಡಿಯಾ ಪರ ವಾಶಿಂಗ್ಟನ್ ಸುಂದರ್ 2, ಅರ್ಷದೀಪ್ ಸಿಂಗ್, ಶಿವಂ ಮಾವಿ, ಕುಲ್ದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು.
ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಶುಭ್ಮನ್ ಗಿಲ್, ಇಶಾನ್ ಕಿಶನ್, ರಾಹುಲ್ ತ್ರಿಪಾಠಿ ರನ್ ಕಲೆ ಹಾಕುವಲ್ಲಿ ವಿಫಲರಾದರು. ನಾಲ್ಕನೇ ವಿಕೆಟ್ಗೆ ಹಾರ್ದಿಕ್ ಪಾಂಡ್ಯ ಹಾಗೂ ಭರವಸೆಯ ಬ್ಯಾಟರ್ ಸೂರ್ಯಕುಮಾರ್ ಯಾದವ್ ತಂಡಕ್ಕೆ ಕೊಂಚ ಆಧಾರವಾದರು.
ಈ ಜೋಡಿ 51 ಎಸೆತಗಳಲ್ಲಿ 68 ರನ್ ಸಿಡಿಸಿತು. ಸೂರ್ಯಕುಮಾರ್ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 47 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಹಾರ್ದಿಕ್ ಪಾಂಡ್ಯ 21 ರನ್ ಸಿಡಿಸಿ ಮಿಂಚಿದರು.
ಮಧ್ಯಮ ಕ್ರಮಾಂಕದಲ್ಲಿ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು.
ಆಲ್ ರೌಂಡರ್ ವಾಶಿಂಗ್ಟನ್ ಸುಂದರ್ ಸೊಗಸಾದ ಆಟವನ್ನು ಆಡಿದರು. ಇವರ ಅಮೋಘ ಇನಿಂಗ್ಸ್ ನಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ 50 ರನ್ ಬಾರಿಸಿ ಅಬ್ಬರಿಸಿದರು.
ನ್ಯೂಜಿಲೆಂಡ್ ಪರ ಮಿಚೆಲ್ ಬ್ರಾಸ್ ವೆಲ್, ಮಿಚೆಲ್ ಸ್ಯಾಂಟ್ನರ್, ಲಾಕಿ ಫಾರ್ಗೂಸನ್ ತಲಾ ಎರಡು ವಿಕೆಟ್ ಪಡೆದರು.
T20, India, New Zealand, Ranchi, Washington Sundar