ಇಂದು ಭಾರತ-ನ್ಯೂಜಿಲೆಂಡ್ ಟಿ20 ಸರಣಿಯ ಮೊದಲ ಪಂದ್ಯ ನಡೆಯಲಿದೆ.
ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತ ತಂಡವು ಕಿವೀಸ್ ವಿರುದ್ಧ ತವರಿನಲ್ಲಿ ತಮ್ಮ ಗೆಲುವಿನ ಓಟವನ್ನು ಮುಂದುವರಿಸಲು ಬಯಸುತ್ತದೆ. ಮಿಚೆಲ್ ಸ್ಯಾಂಟ್ನರ್ ನಾಯಕತ್ವದಲ್ಲಿ ನ್ಯೂಜಿಲೆಂಡ್ 6 ವರ್ಷಗಳ ನಂತರ ತವರಿನಲ್ಲಿ ಭಾರತವನ್ನು ಸೋಲಿಸುವ ವಿಶ್ವಾಸದಲ್ಲಿದೆ. ಆದರೆ, ಈ ಸರಣಿ ಎರಡೂ ತಂಡಗಳಿಗೆ ಸುಲಭವಲ್ಲ.
ಈ ಸರಣಿಯಲ್ಲಿ ತಂಡದ ಬಿಗ್-3 (ರೋಹಿತ್, ಕೊಹ್ಲಿ, ರಾಹುಲ್) ತಂಡದ ಭಾಗವಾಗದ ಕಾರಣ ಯುವ ಆಟಗಾರರಲ್ಲಿ ಪರಿಣಾಮಕಾರಿ ತಂಡದ ಸಂಯೋಜನೆಯನ್ನು ಕಂಡುಕೊಳ್ಳುವ ಸವಾಲನ್ನು ಪಾಂಡ್ಯ ಎದುರಿಸಲಿದ್ದಾರೆ. ಹಾಗಾಗಿ ಸ್ಯಾಂಟ್ನರ್ ಕೂಡ ಟ್ರೆಂಟ್ ಬೌಲ್ಡ್, ಟಿಮ್ ಸೌಥಿ, ಕೇನ್ ವಿಲಿಯಮ್ಸನ್ ಅವರಂತಹ ಹಿರಿಯರಿಲ್ಲದೇ ಕಣಕ್ಕಿಳಿಯಬೇಕಾಗುತ್ತದೆ.
ಅಂಕಿ-ಅಂಶಗಳಲ್ಲಿ ಎರಡೂ ತಂಡಗಳು ಸಮಬಲದಲ್ಲಿವೆ. ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇದುವರೆಗೆ 22 ಟಿ20 ಪಂದ್ಯಗಳು ನಡೆದಿವೆ. ಈ ಪೈಕಿ ಭಾರತ 10ರಲ್ಲಿ ಮತ್ತು ನ್ಯೂಜಿಲೆಂಡ್ ತಂಡ 9ರಲ್ಲಿ ಗೆಲುವಿನ ರುಚಿ ಕಂಡಿದೆ. ಆದರೆ 3 ಪಂದ್ಯಗಳು ಟೈ ಆಗಿವೆ. ಮತ್ತೊಂದೆಡೆ, ರಾಂಚಿ ಮೈದಾನದ ಬಗ್ಗೆ ನೋಡೋದಾದ್ರೆ, ಭಾರತ ಈ ಮೈದಾನದಲ್ಲಿ ಇದುವರೆಗೆ 3 ಟಿ20 ಪಂದ್ಯಗಳನ್ನು ಆಡಿದೆ ಮತ್ತು ಮೂರರಲ್ಲಿ ಗೆದ್ದಿದೆ.

ಸತತ 5ನೇ ಪಂದ್ಯ ಗೆಲ್ಲುವ ಅವಕಾಶ
ಇಂದು ಭಾರತಕ್ಕೆ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಸತತ 5 ಪಂದ್ಯಗಳನ್ನು ಗೆಲ್ಲುವ ಅವಕಾಶವಿದೆ. ಇದಕ್ಕೂ ಮುನ್ನ ಭಾರತ ನೆಲದಲ್ಲಿ ಆಡಿದ 4 ಪಂದ್ಯಗಳನ್ನು ಗೆದ್ದಿದೆ. 2017ರಲ್ಲಿ ರಾಜ್‌ಕೋಟ್ ಮೈದಾನದಲ್ಲಿ ಕೊನೆಯ ಸೋಲು ಕಂಡಿತ್ತು.
ನ್ಯೂಜಿಲೆಂಡ್ ತಂಡವನ್ನು ಸತತ ನಾಲ್ಕನೇ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡುವ ಅವಕಾಶ ಭಾರತಕ್ಕಿದೆ. ಇದಕ್ಕೂ ಮುನ್ನ ಭಾರತ ಕಳೆದ 3 ಸರಣಿಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಜಯ ಸಾಧಿಸಿತ್ತು.
ಶುಕ್ರವಾರ ರಾಂಚಿಯಲ್ಲಿ ಮಳೆಯಾಗುವ ಸಾಧ್ಯತೆ ತೀರಾ ಕಡಿಮೆ. 10 ರಷ್ಟು ಮಳೆಯಾಗುವ ಸಾಧ್ಯತೆಗಳಿದ್ದು, ಶೇ.90 ರಷ್ಟು ಬಿಸಿಲು ಇರಲಿದೆ. ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡಲು ಬಯಸುತ್ತದೆ. ಇಲ್ಲಿ ಚೇಸಿಂಗ್ ತಂಡ 25 ಪಂದ್ಯಗಳಲ್ಲಿ 16ರಲ್ಲಿ ಗೆದ್ದಿದೆ.
T20, Dhoni, India, New Zealand,