T20 CWC 2022 ಕ್ರಿಕೆಟ್‌ನಲ್ಲಿ ತಮ್ಮ ಶ್ರೇಷ್ಠ ಪ್ರದರ್ಶನದ ಮೂಲಕ ಮಿಂಚು ಹರಿಸುತ್ತಿರುವ ಟೀಂ ಇಂಡಿಯಾ(Team India)ದ ಬ್ಯಾಟಿಂಗ್ ಸ್ಟಾರ್ ಸೂರ್ಯಕುಮಾರ್ ಯಾದವ್(Surya Kumar Yadav) ಪ್ರಸಕ್ತ ವರ್ಷದಲ್ಲಿ ಮತ್ತೊಂದು ಮೈಲಿಗಲ್ಲು ದಾಟಲು ಸಜ್ಜಾಗಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಸೂರ್ಯಕುಮಾರ್, ಪ್ರಸ್ತುತ ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಈ ನಡುವೆ 2022ರಲ್ಲಿ ಶ್ರೇಷ್ಠ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡಿರುವ “ಸ್ಕೈ” ಮತ್ತೊಂದು ಸಾವಿರ ರನ್‌ಗಳ ಗಡಿಯಲ್ಲಿದ್ದಾರೆ. ಈ ವರ್ಷದಲ್ಲಿ ಟಿ20 ಕ್ರಿಕೆಟ್‌ನಲ್ಲಿ 965 ರನ್‌ಗಳಿಸಿರುವ ಸೂರ್ಯಕುಮಾರ್, ಇದೀಗ 1000 ರನ್‌ಗಳ ಗಡಿದಾಟಲು ಕಾಯುತ್ತಿದ್ದಾರೆ.
ಮೊಹಮ್ಮದ್ ರಿಜ್ವಾನ್ ಹಾಗೂ ಬಾಬರ್ ಆಜ಼ಂ ನಂತರದಲ್ಲಿ ಇತ್ತೀಚೆಗೆ ಒಂದು ವರ್ಷದಲ್ಲಿ ಸಾವಿರ ಟಿ20 ರನ್‌ಗಳಿಸಿದ ಮೂರನೇ ಆಟಗಾರನಾಗಿ ಸೂರ್ಯಕುಮಾರ್ ಯಾದವ್ ಕಾಣಿಸಿಕೊಂಡಿದ್ದಾರೆ. ಭರ್ಜರಿ ಬ್ಯಾಟಿಂಗ್ ಮೂಲಕ ಮಿಂಚುತ್ತಿರುವ ಸೂರ್ಯ, 2022ರಲ್ಲಿ 1000 ಟಿ20 ರನ್‌ಗಳನ್ನ ಪೂರೈಸಲು ಕಾಯುತ್ತಿದ್ದಾರೆ. ಸೂರ್ಯಕುಮಾರ್ ಒಂದು ಸಾವಿರ ರನ್‌ಗಳನ್ನು ಪೂರೈಸಿದ್ದೇ ಆದಲ್ಲಿ, ಈ ಸಾಧನೆ ಮಾಡಿದ ಭಾರತದ ಮೊದಲು ಆಟಗಾರ ಎನಿಸಿಕೊಳ್ಳಲಿದ್ದಾರೆ.
2022ರಲ್ಲಿ ಸೂರ್ಯಕುಮಾರ್ ಯಾದವ್, ಆಡಿರುವ 27 ಟಿ20 ಪಂದ್ಯಗಳಲ್ಲಿ 965 ರನ್‌ಗಳಿಸಿದ್ದು, 41.95ರ ಬ್ಯಾಟಿಂಗ್ ಸರಾಸರಿ ಹಾಗೂ 183.80 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ಸೂರ್ಯ, ಪ್ರಸಕ್ತ T20 ವಿಶ್ವಕಪ್‌ನಲ್ಲಿ ಎರಡು ಅರ್ಧಶತಕಗಳನ್ನ ಸಹ ಸಿಡಿಸಿದ್ದಾರೆ. ಸೂಪರ್ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್ ಯಾದವ್, ನ.6ರಂದು ನಡೆಯುವ ಜಿಂಬಾಬ್ವೆ ವಿರುದ್ಧದ ಸೂಪರ್-12 ಪಂದ್ಯದಲ್ಲಿ 1 ಸಾವಿರ ರನ್‌ಗಳ ಗಡಿದಾಟುವ ತವಕದಲ್ಲಿದ್ದಾರೆ.
ಇದನ್ನೂ ಓದಿ – https://sportskarnataka.com/virat-kohli-mahe…aise-virat-kohli/