T20 CWC 2022 – ಟೀಂ ಇಂಡಿಯಾದ(Team India) ʼರನ್ ಮಷಿನ್ʼ ವಿರಾಟ್ ಕೊಹ್ಲಿ(Virat Kohli), ವಿಶ್ವ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನ ಧೂಳಿಪಟ ಮಾಡುವ ಮೂಲಕ ದಾಖಲೆಗಳ ಸರದಾರ ಎನಿಸಿದ್ದಾರೆ. ಆದರೆ T20Iನಲ್ಲಿ ಈವರೆಗೂ ʼಚೇಸ್ ಮಾಸ್ಟರ್ʼ ಕೊಹ್ಲಿ ಹೆಸರಿನಲ್ಲಿದ್ದ ಪ್ರಮುಖ ದಾಖಲೆಯೊಂದು ಇದೀಗ ಜಿಂಬಾವ್ವೆ(Zimbabwe) ತಂಡದ ಸಿಕಂದರ್ ರಾಜ಼ಾ ಮುಡಿಗೇರಿದೆ.
ಕ್ರಿಕೆಟ್ ಲೋಕದ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್ ಕಿಂಗ್ ಕೊಹ್ಲಿ, ಟಿ20ಯಲ್ಲಿ ಸಹ ತಮ್ಮದೇ ಹವಾ ಸೃಷ್ಟಿಸಿದ್ದಾರೆ. ಆದರೆ ಜಿಂಬಾಬ್ವೆ ತಂಡದ ಯುವ ಆಲ್ರೌಂಡರ್ ಸಿಕಂದರ್ ರಾಜಾ಼, ಚೇಸ್ ಮಾಸ್ಟರ್ ಹೆಸರಿನಲ್ಲಿದ್ದ ದಾಖಲೆಯನ್ನೇ ಬ್ರೇಕ್ ಮಾಡಿದ್ದಾರೆ. 2016ರಲ್ಲಿ ನಡೆದ T20I ಪಂದ್ಯದಲ್ಲಿ ವಿರಾಟ್ ಕೊಹ್ಲಿ, 6 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಮಿಂಚಿದ್ದರು. ಆದರೆ ಇತ್ತೀಚೆಗೆ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಸಿಕಂದರ್ ರಾಜ಼ಾ, ಈ ದಾಖಲೆ ಬ್ರೇಕ್ ಮಾಡಿದ್ದಾರೆ.
ಪಾಕಿಸ್ತಾನದ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಆಲ್ರೌಂಡರ್ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಿಂಚಿದ್ದರು. ಅಲ್ಲದೇ ತಮ್ಮ ಈ ಪ್ರದರ್ಶನದೊಂದಿಗೆ ರಾಜಾ಼, ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡರು. ಆ ಮೂಲಕ 2022ರಲ್ಲಿ ಆಡಿದ ಟಿ20 ಪಂದ್ಯಗಳಲ್ಲಿ 7ನೇ ಬಾರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನ ತಮ್ಮದಾಗಿಸಿಕೊಂಡರು. ಜಿಂಬಾಬ್ವೆ ತಂಡದ ಪ್ರಮುಖ ಆಟಗಾರ ಎನಿಸಿರುವ ಸಿಕಂದರ್ ರಾಜಾ಼, 2022ರ ಟಿ20 ವಿಶ್ವಕಪ್‌ನಲ್ಲೇ 3ನೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
ಪರ್ತ್‌ನಲ್ಲಿ ನಡೆದ ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ 3 ವಿಕೆಟ್ ಪಡೆದಿದ್ದ ಸಿಂಕದರ್ ರಾಜಾ಼, ಬ್ಯಾಟಿಂಗ್‌ನಲ್ಲೂ ಮಿಂಚಿದ್ದರು. ರೋಚಕ ಪಂದ್ಯದಲ್ಲಿ ಜಿಂಬಾವ್ವೆ ತಂಡ 1 ರನ್‌ಗಳ ಅವಿಸ್ಮರಣೀಯ ಗೆಲುವು ಸಾಧಿಸಿದರೆ. ಹೊಸ ಆತ್ಮವಿಶ್ವಾಸದಲ್ಲಿರುವ ಸಿಕಂದರ್ ರಾಜಾ಼ ಸೂಪರ್-12 ಹಂತದ ಮುಂದಿನ ಪಂದ್ಯಗಳಲ್ಲೂ ಇದೇ ಪ್ರದರ್ಶನ ನೀಡುತ್ತಾರಾ? ಎಂಬ ಕುತೂಹಲ ಮೂಡಿಸಿದೆ.