T20 CWC 2022 : ಟಿ20 ಕ್ರಿಕೆಟ್ನಲ್ಲಿ ʼಡಾಟ್ ಬಾಲ್ʼ(Dot Ball) ಅಂದ್ರೆ ಅದಕ್ಕೆ ಚಿನ್ನಕ್ಕಿಂತಲೂ ಬೆಲೆ ಜಾಸ್ತಿ. ಬ್ಯಾಟ್ಸ್ಮನ್ಗಳ ದಿಕ್ಕುತಪ್ಪಿಸಿ ಡಾಟ್ ಬಾಲ್ ಮಾಡುವುದು ಬೌಲರ್ಗಳ ಚಾಣಾಕ್ಷತನವನ್ನ ತೋರಿಸುತ್ತೆ. ಪ್ರಸಕ್ತ ಟಿ20 ವಿಶ್ವಕಪ್(T20 World Cup)ನಲ್ಲಿ ಹೆಚ್ಚು ಡಾಟ್ ಬಾಲ್ ಮಾಡಿರುವ ಟಾಪ್ ಬೌಲರ್(Top Bowlers)ಗಳ ಲಿಸ್ಟ್ ಇಲ್ಲಿದೆ.
ಆಸೀಸ್ ಅಂಗಳದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಹೆಚ್ಚಿನ ಡಾಟ್ ಬಾಲ್ ಮಾಡಿರುವ ಬೌಲರ್ಗಳ ಸಾಲಿನಲ್ಲಿ ಟೀಂ ಇಂಡಿಯಾದ ʼಸ್ವಿಂಗ್ ಸ್ಪೆಷಲಿಸ್ಟ್ʼ ಭುವನೇಶ್ವರ್ ಕುಮಾರ್(Bhuvneshwar Kumar) ಅಗ್ರ ಸ್ಥಾನದಲ್ಲಿದ್ದಾರೆ. ಆಡಿರುವ 2 ಪಂದ್ಯಗಳಿಂದ 7 ಓವರ್ ಬೌಲಿಂಗ್ ಮಾಡಿರುವ ಭುವಿ, ಒಟ್ಟು 31 ಡಾಟ್ ಬಾಲ್ಗಳನ್ನ ಮಾಡಿದ್ದಾರೆ. ಅಲ್ಲದೇ ಸಿಡ್ನಿಯಲ್ಲಿ ನಡೆದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್, 2 ಮೇಡನ್ ಓವರ್ಗಳನ್ನ ಸಹ ಮಾಡಿರುವುದು ವಿಶೇಷ.
ʼಡಾಟ್ ಬಾಲ್ʼ ಎಕ್ಸ್ಪರ್ಟ್ಸ್ಗಳ ಲಿಸ್ಟ್ನ 2ನೇ ಸ್ಥಾನದಲ್ಲಿ ಇಂಗ್ಲೆಂಡ್ನ ʼಪೇಸ್ ಸೆನ್ಸೇಷನ್ʼ ಮಾರ್ಕ್ ವುಡ್ ಇದ್ದಾರೆ. ಮಾಡಿರುವ 8 ಓವರ್ಗಳಲ್ಲಿ ಮಾರ್ಕ್ ವುಡ್, 27 ಡಾಟ್ ಬಾಲ್ಗಳನ್ನ ಮಾಡಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಬಾಂಗ್ಲಾದೇಶ ತಂಡದ 23ರ ಹರೆಯದ ಯುವ ಬೌಲರ್, ಹಸನ್ ಮಮೂದ್ ಕಾಣಿಸಿಕೊಂಡಿದ್ದಾರೆ. ಹಸನ್ ಕೂಡ ಮಾಡಿರುವ 8 ಓವರ್ಗಳಲ್ಲಿ ಮಾರ್ಕ್ ವುಡ್, 27 ಡಾಟ್ ಬಾಲ್ಗಳನ್ನ ಮಾಡಿದ್ದಾರೆ.
ಈ ಲಿಸ್ಟ್ನ ನಾಲ್ಕನೇ ಸ್ಥಾನದಲ್ಲಿ ಪಾಕಿಸ್ತಾನದ ಹ್ಯಾರಿಸ್ ರಾಫ್ ಇದ್ದಾರೆ. ಆಡಿರುವ ಎರಡು ಪಂದ್ಯಗಳಿಂದ 8 ಓವರ್ ಬೌಲಿಂಗ್ ಮಾಡಿರುವ ರಾಫ್, 26 ಡಾಟ್ ಬಾಲ್ಗಳನ್ನ ಮಾಡಿದ್ದಾರೆ. ಇವರ ಬಳಿಕ ಹೆಚ್ಚಿನ ʼಡಾಟ್ ಬಾಲ್ʼ ಮಾಡಿರುವ ಬೌಲರ್ಗಳ ಪಟ್ಟಿಯಲ್ಲಿ ಬಾಂಗ್ಲಾದೇಶದ ಮತ್ತೋರ್ವ ಆಟಗಾರ ಟಸ್ಕಿನ್ ಅಹ್ಮೆದ್ ಕಾಣಿಸಿಕೊಂಡಿದ್ದಾರೆ. 7 ಓವರ್ ಬೌಲಿಂಗ್ ಮಾಡಿರುವ ಟಸ್ಕಿನ್ ಅಹ್ಮೆದ್, 24 ಡಾಟ್ ಬಾಲ್ಗಳನ್ನ ಮಾಡಿದ್ದಾರೆ. ಈ ಲಿಸ್ಟ್ನ 6ನೇ ಸ್ಥಾನದಲ್ಲಿ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಕಾಣಿಸಿಕೊಂಡಿದ್ದು, ಮಾಡಿರುವ 8 ಓವರ್ಗಳಲ್ಲಿ 24 ಡಾಟ್ ಬಾಲ್ಗಳನ್ನ ಮಾಡಿದ್ದಾರೆ.