ಆಸೀಸ್ ಅಂಗಳದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲುವಿನ ಫೇವರೆಟ್ ಎನಿಸಿರುವ ಇಂಗ್ಲೆಂಡ್(England) ತಂಡಕ್ಕೆ ಅದೃಷ್ಟ ಕೈಕೊಟ್ಟ ಪರಿಣಾಮ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ʼಡಕ್ ವರ್ತ್ ಲೂಯಿಸ್ʼ(DLS Method) ನಿಯಮದ ಪ್ರಕಾರ 5 ರನ್‌ಗಳ ಸೋಲಿನ ಆಘಾತ ಕಂಡಿದೆ.
ಮೆಲ್ಬೋರ್ನ್(Melbourne) ಕ್ರಿಕೆಟ್ ಮೈದಾನ(ದಲ್ಲಿ ನಡೆದ ಪಂದ್ಯದ ಆರಂಭದಿಂದಲೇ ಮಳೆಯ ಕಣ್ಣಾಮುಚ್ಚಾಲೆ ನಡೆಯಿತು. ಆದರೆ ನಂತರದಲ್ಲಿ ಮಳೆರಾಯ ಬಿಡುವು ಕೊಟ್ಟ ಪರಿಣಾಮ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 20 ಓವರ್‌ಗಳಲ್ಲಿ 19.2 ಓವರ್‌ಗಳಲ್ಲಿ 157 ರನ್‌ಗಳಿಗೆ ಆಲೌಟ್ ಆಯಿತು. ಟಾರ್ಗೆಟ್ ಚೇಸ್ ಮಾಡಿದ ಇಂಗ್ಲೆಂಡ್ 14.3 ಓವರ್‌ಗಳಲ್ಲಿ 5 ವಿಕೆಟ್‌ಗೆ 105 ರನ್‌ಗಳಿಸಿತ್ತು. ಈ ಹಂತದಲ್ಲಿ ಸುರಿದ ಮಳೆಯಿಂದಾಗಿ ಪಂದ್ಯವನ್ನ ಅರ್ಧಕ್ಕೆ ಮೊಟಕುಗೊಳಿಸಲಾಯಿತು.
ʼಡಕ್ ವರ್ತ್ ಲೂಯಿಸ್ʼ ನಿಯಮದನ್ವಯ ಜಾಸ್ ಬಟ್ಲರ್ ಸಾರಥ್ಯದ ಇಂಗ್ಲೆಂಡ್ 14.3 ಓವರ್‌ಗಳಲ್ಲಿ 110 ರನ್‌ಗಳಿಸಬೇಕಿತ್ತು. ಆದರೆ ಅಗತ್ಯ ರನ್‌ಗಳಿಸುವಲ್ಲಿ ವಿಫಲವಾಗಿ 5 ರನ್‌ಗಳ ಹಿನ್ನಡೆ ಅನುಭವಿಸಿದ್ದ ಇಂಗ್ಲೆಂಡ್ 5 ರನ್‌ಗಳ ಹಿನ್ನಡೆಯೊಂದಿಗೆ ಅಚ್ಚರಿಯೆಂಬಂತೆ 5 ರನ್‌ಗಳ ಸೋಲಿನ ಆಘಾತ ಅನುಭವಿಸಿದೆ. ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿದ್ದ ಆಂಗ್ಲರ ಪಡೆ, ಐರ್ಲೆಂಡ್ ವಿರುದ್ಧ ಮತ್ತೊಮ್ಮೆ ಆಘಾತಕಾರಿ ಸೋಲು ಕಂಡಿದೆ. ಆದರೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಾಂಘಿಕ ಪ್ರದರ್ಶನ ನೀಡಿದ ಐರ್ಲೆಂಡ್, ಗೆಲುವಿನ ಖಾತೆ ತೆರೆದಿದೆ.
ಬಾಲ್ಬರ್ನಿ ಅರ್ಧಶತಕದ ಮಿಂಚು:
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಆದರೆ ನಾಯಕ ಆಂಡ್ರ್ಯೋ ಬಾಲ್ಬರ್ನಿ(62) ಅವರ ಅದ್ಭುತ ಬ್ಯಾಟಿಂಗ್ ಹಾಗೂ ಲಾರನ್ ಟಕ್ಕರ್(34) ಅವರ ಜವಾಬ್ದಾರಿಯ ಆಟದಿಂದ 19.2 ಓವರ್‌ನಲ್ಲಿ 157 ರನ್‌ಗಳ ಪೈಪೋಟಿಯ ಮೊತ್ತ ಕಲೆಹಾಕಿತು. ಇಂಗ್ಲೆಂಡ್ ಪರ ವುಡ್ ಹಾಗೂ ಲಿವಿಂಗ್‌ಸ್ಟೋನ್ ತಲಾ 3 ವಿಕೆಟ್ ಪಡೆದು ಮಿಂಚಿದರು.

ಆಂಗ್ಲರ ಬ್ಯಾಟಿಂಗ್ ವೈಫಲ್ಯ:
ಐರ್ಲೆಂಡ್ ನೀಡಿದ 158 ರನ್‌ಗಳ ಟಾರ್ಗೆಟ್ ಚೇಸ್ ಮಾಡಿದ ಇಂಗ್ಲೆಂಡ್ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ನಾಯಕ ಜೋಸ್ ಬಟ್ಲರ್(0) ವಿಕೆಟ್ ಕಳೆದುಕೊಂಡಿತು. ಇವರ ಬೆನ್ನಲ್ಲೇ ಅಲೆಕ್ಸ್ ಹೇಲ್ಸ್(7) ಹಾಗೂ ಬೆನ್ ಸ್ಟೋಕ್ಸ್(6) ಕೂಡ ಪೆವಿಲಿಯನ್ ಸೇರಿದರು. ಪರಿಣಾಮ 29 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಡಾವಿಡ್ ಮಲಾನ್(35), ಹ್ಯಾರಿ ಬ್ರೂಕ್ಸ್(18) ಹಾಗೂ ಮೊಯಿನ್ ಅಲಿ(24*) ಅಲ್ಪಮೊತ್ತದ ರನ್‌ಗಳಿಸಿದರೂ, D/L ನಿಯಮದನ್ವಯ ತಂಡಕ್ಕೆ ಅಗತ್ಯವಿದ್ದ ರನ್‌ಗಳಿಸಲು ಸಾಧ್ಯವಾಗಲಿಲ್ಲ.