ಆಸೀಸ್(Australia) ಅಂಗಳದಲ್ಲಿ ನಡೆಯುತ್ತಿರುವ T20 World Cup ಟೂರ್ನಿಯ ಸೆಮೀಸ್‌ಗೆ ಲಗ್ಗೆಯಿಟ್ಟಿರುವ ಭಾರತ(Team India ಹಾಗೂ ಪಾಕಿಸ್ತಾನ(Pakistan) ಇದೀಗ ಶ್ರೀಲಂಕಾ ತಂಡದ ರೆಕಾರ್ಡ್ ಮೇಲೆ ಕಣ್ಣಿಟ್ಟಿವೆ.
ಎರಡು ತಂಡಗಳು ಸೂಪರ್-12 ಹಂತದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ 2022ರ ಟಿ20 ವಿಶ್ವಕಪ್ ಟೂರ್ನಿಯ ಸೆಮೀಸ್‌ಗೆ ಎಂಟ್ರಿಕೊಟ್ಟಿವೆ. ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಎರಡು ತಂಡಗಳು, ಪ್ರಶಸ್ತಿ ಗೆಲ್ಲುವ ಜೊತೆಗೆ ಶ್ರೀಲಂಕಾ ಹೆಸರಿನಲ್ಲಿರುವ ದಾಖಲೆ ಸರಿಗಟ್ಟುವ ತವಕದಲ್ಲಿವೆ. ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿ, ಸೆಮೀಸ್ ಪ್ರವೇಶಿಸುವಲ್ಲಿ ಶ್ರೀಲಂಕಾ ವಿಫಲವಾಯಿತು. ಆದರೂ ಟಿ20 ವಿಶ್ವಕಪ್‌ನಲ್ಲಿ ಹೆಚ್ಚು ಬಾರಿ ಫೈನಲ್ ಪ್ರವೇಶಿಸಿರುವ ದಾಖಲೆ ಲಂಕಾ ತಂಡದ ಹೆಸರಿನಲ್ಲಿದೆ.
ಶ್ರೀಲಂಕಾ ತಂಡ 2014ರಲ್ಲಿ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದು ಬೀಗಿತ್ತು. ಆದರೆ ಲಂಕಾ ಪಡೆ ಈವರೆಗೂ ಮೂರು ಬಾರಿ ಟಿ20 ವಿಶ್ವಕಪ್‌ನ ಫೈನಲ್ ಪ್ರವೇಶಿಸಿದ್ದು, 2009, 2012 ಹಾಗೂ 2014ರಲ್ಲಿ ಫೈನಲ್ ಪ್ರವೇಶಿಸುವಲ್ಲಿ ಶ್ರೀಲಂಕಾ ಯಶಸ್ವಿಯಾಗಿತ್ತು. ಹೀಗಾಗಿ ಪ್ರಸ್ತುತ ತಲಾ ಎರಡು ಬಾರಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪ್ರವೇಶಿಸಿರುವ ಉಭಯ ತಂಡಗಳು ಇದೀಗ ಮತ್ತೆ ಫೈನಲ್ ಪ್ರವೇಶಿಸಿ ಶ್ರೀಲಂಕಾ ತಂಡದ ರೆಕಾರ್ಟ್ ಬ್ರೇಕ್ ಮಾಡುವ ಲೆಕ್ಕಾಚಾರದಲ್ಲಿದೆ.
ಭಾರತ ಹಾಗೂ ಪಾಕಿಸ್ತಾನ ತಂಡ ಈವರೆಗೂ ತಲಾ ಎರಡು ಬಾರಿ ಟಿ20 ವಿಶ್ವಕಪ್‌ನ ಫೈನಲ್ ಪ್ರವೇಶಿಸಿವೆ. 2007ರ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದವು. ಈ ವೇಳೆ ಭಾರತ ಪ್ರಶಸ್ತಿ ಗೆದ್ದು ಚಾಂಪಿಯನ್ ಎನಿಸಿದರೆ. ಇದಾದ ನಂತರ 2014ರಲ್ಲಿ ಭಾರತ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಪಾಕಿಸ್ತಾನ 2007ರ ಬಳಿಕ 2009ರಲ್ಲಿ ಫೈನಲ್ ಪ್ರವೇಶಿಸಿದ್ದ ಪಾಕಿಸ್ತಾನ, ಪ್ರಶಸ್ತಿ ಗೆದ್ದುಬೀಗಿತ್ತು. ಸದ್ಯ ಟೂರ್ನಿಯ ಸೆಮೀಸ್‌ನಲ್ಲಿ ಸ್ಥಾನ ಪಡೆದಿರುವ ಎರಡು ತಂಡಗಳು ಮೂರನೇ ಬಾರಿಗೆ ಫೈನಲ್ ಪ್ರವೇಶಿಸುವ ನಿರೀಕ್ಷೆಯಲ್ಲಿದೆ. ಈ ಸಾಧನೆ ಮಾಡಲು ಎರಡು ತಂಡಗಳಿಗೂ ಅವಕಾಶವಿದ್ದು, ಉಭಯ ತಂಡಗಳಲ್ಲಿ ಯಾರು ಫೈನಲ್ ಪ್ರವೇಶಿಸುತ್ತಾರೆ ಕಾದುನೋಡಬೇಕಿದೆ.