T20 CWC 2022 ಆಸ್ಟ್ರೇಲಿಯಾ(Australia)ದಲ್ಲಿ ನಡೆಯುತ್ತಿರುವ T20 ವಿಶ್ವಕಪ್(T20 World Cup) ಟೂರ್ನಿ ಉಪಾಂತ್ಯ ತಲುಪಿದ್ದು, ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಡಲು ನಾಲ್ಕು ತಂಡಗಳು ತಮ್ಮದೇ ರಣತಂತ್ರ ರೂಪಿಸಿಕೊಂಡು ಸಜ್ಜಾಗಿವೆ.
ಕಾಂಗರೂ ನಾಡಿಯಲ್ಲಿ ನಡೆಯುತ್ತಿರುವ T20 ವಿಶ್ವಕಪ್ ಟೂರ್ನಿ ಹಲವು ರೋಚಕ ಹಣಾಹಣಿಗೆ ಸಾಕ್ಷಿಯಾಗಿದೆ. ಬ್ಯಾಟ್ಸ್ಮನ್ಗಳ ಅಬ್ಬರದ ಜತೆಗೆ ವಿಶ್ವ ಕ್ರಿಕೆಟ್ನ ಸ್ಟಾರ್ ವೇಗದ ಬೌಲರ್ಗಳು ಸಹ ಶರವೇಗದ ಬೌಲಿಂಗ್ ದಾಳಿಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೀಗಾಗಿ ICC T20 ವಿಶ್ವಕಪ್ನ ಸೂಪರ್-12 ಪಂದ್ಯದಲ್ಲಿ ದಾಖಲಾದ ವೇಗದ ಬಾಲ್ಗಳ ಡೀಟೆಲ್ಸ್ ಇಲ್ಲಿದೆ.
ಆಸ್ಟ್ರೇಲಿಯಾದ ಅದ್ಭುತ ಪಿಚ್ಗಳಲ್ಲಿ ನಡೆಯುತ್ತಿರುವ ಚುಟುಕು ಕ್ರಿಕೆಟ್ ಹಣಾಹಣಿಯಲ್ಲಿ ದಾಖಲಾದ “ಸ್ಪೀಡ್ ಬಾಲ್”ಗಳ ಲಿಸ್ಟ್ನಲ್ಲಿ ಮೊದಲ ಸ್ಥಾನದಲ್ಲಿ ಇಂಗ್ಲೆಂಡ್ನ ಮಾರ್ಕ್ ವುಡ್ ಮಾಡಿದ, 154.74 ಕಿ.ಮೀ ವೇಗದ ಬಾಲ್ ಇದೆ. ಇವರ ನಂತರದ ಸ್ಥಾನದಲ್ಲಿ ನ್ಯೂಜಿ಼ಲೆಂಡ್ನ ಲೂಕ್ಕಿ ಫೆರ್ಗುಸನ್ ಇದ್ದು, 154.55 ಕ್ರಿ.ಮೀ ವೇಗದ ಬಾಲ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇದಾದ ನಂತರದಲ್ಲಿ ಮತ್ತೊಮ್ಮೆ ಮಾರ್ಕ್ ವುಡ್ ಕಾಣಿಸಿಕೊಂಡಿದ್ದು, ವುಡ್ ಮಾಡಿದ 154.48 ಕಿ.ಮೀ ವೇಗದ ಬಾಲ್ 3ನೇ ಸ್ಥಾನದಲ್ಲಿದೆ. ಈ ಲಿಸ್ಟ್ನ ನಾಲ್ಕನೇ ಸ್ಥಾನದಲ್ಲಿ ಸೌತ್ ಆಫ್ರಿಕಾದ ಅನ್ರಿಕ್ ನೋಕಿಯಾ ಕಾಣಿಸಿಕೊಂಡಿದ್ದು, ಇವರು ಮಾಡಿದ 154.31 ಕಿ.ಮೀ ಪ್ರಸಕ್ತ ಟಿ20 ವಿಶ್ವಕಪ್ನ ಸೂಪರ್-12 ಹಣಾಹಣಿಯಲ್ಲಿ ದಾಖಲಾದ ವೇಗದ ಬಾಲ್ಗಳಾಗಿದೆ. ಉಳಿದಂತೆ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್, ಟೀಂ ಇಂಡಿಯಾದ ಮೊಹಮ್ಮದ್ ಶಮಿ, ಪಾಕಿಸ್ತಾನದ ಶಾಹೀನ್ ಅಫ್ರಿದಿ ಸಹ ತಮ್ಮ ಕೈಚಳಕ ತೋರಿದ್ದರು, ವೇಗದ ಬೌಲಿಂಗ್ನಲ್ಲಿ ದೊಡ್ಡಮಟ್ಟದ ಸದ್ದು ಮಾಡಿಲ್ಲ.