T20 CWC 2022 – ವಿಶ್ವಕಪ್ ಟಿ20 ಪಂದ್ಯಾವಳಿಯಲ್ಲಿ ಇಂದು ಮತ್ತೊಂದು ಬಿಗ್ ಮ್ಯಾಚ್ ನಡೆಯುತ್ತಿದ್ದು, ಸೂಪರ್ 12ನ ಮಹತ್ವದ ಪಂದ್ಯದಲ್ಲಿ ಆಸ್ಟ್ರೇಲಿಯಾ(Australia) ಹಾಗೂ ಇಂಗ್ಲೆಂಡ್(England) ತಂಡಗಳು ಮುಖಾಮುಖಿಯಾಗುತ್ತಿವೆ. ಟೂರ್ನಿಯ ಸೆಮಿಫೈನಲ್(Semi-Final) ಪ್ರವೇಶಿಸುವ ಕನಸು ಹೊತ್ತಿರುವ ಎರಡು ತಂಡಗಳಿಗೂ ಮೆಲ್ಬೋರ್ನ್(Melbourne)ನಲ್ಲಿ ನಡೆಯುವ ಇಂದಿನ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.
ಟೂರ್ನಿಯ ಆರಂಭಿಕ ಪಂದ್ಯದಲ್ಲೇ ನ್ಯೂಜಿ಼ಲೆಂಡ್ ವಿರುದ್ಧ ಸೋಲಿನ ಆಘಾತ ಕಂಡಿದ್ದ ಅತಿಥೇಯ ಆಸ್ಟ್ರೇಲಿಯಾ, ನಂತರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿಗೆ ಬಲಿಷ್ಠ ಕಮ್ ಬ್ಯಾಕ್ ಮಾಡಿದೆ. ಲಂಕಾ ವಿರುದ್ಧ ದೊರೆತ ಗೆಲುವಿನೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಫಿಂಚ್ ಪಡೆ, ಆಂಗ್ಲರನ್ನ ಮಣಿಸೋಕ್ಕೆ ಸಜ್ಜಾಗಿದೆ. ಆದರೆ ಕಳೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಆಘಾತಕಾರಿ ಸೋಲು ಕಂಡಿರುವ ಇಂಗ್ಲೆಂಡ್, ಈ ಶಾಕ್ನಿಂದ ಹೊರಬಂದು ಆಸ್ಟ್ರೇಲಿಯಾದ ಸವಾಲಿಗೆ ದಿಟ್ಟ ಪ್ರತ್ಯುತ್ತರ ನೀಡಬೇಕಿದೆ.
ಗ್ರೂಪ್-1ರ ಈ ಎರಡು ತಂಡಗಳು ಸೆಮೀಸ್ ಪ್ರವೇಶಿಸುವ ಫೇವರೆಟ್ ತಂಡಗಳಾಗಿದ್ದರೂ, ಉಭಯ ತಂಡಗಳು ದುರಂತ ಸೋಲು ಕಂಡಿರುವ ಪರಿಣಾಮ ಯಾವ ತಂಡದ ಸೆಮೀಸ್ ಹಾದಿ ಇನ್ನೂ ನಿರ್ಧಾರವಾಗಿಲ್ಲ. ಒಂದೊಮ್ಮೆ ಇಂದಿನ ಪಂದ್ಯದಲ್ಲಿ ಯಾವುದೇ ತಂಡ ಸೋಲು ಕಂಡರು ಆ ತಂಡದ ಸೆಮೀಸ್ ದಾರಿ ಇನ್ನಷ್ಟು ಕಠಿಣವಾಗಲಿದೆ. ಅಲ್ಲದೇ ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದರೂ, ತಂಡಗಳ ನೆಟ್ ರನ್ ರೇಟ್ ಆಧಾರದ ಮೇಲೆ ತಂಡಗಳ ಹಣೆಬರಹ ಗೊತ್ತಾಗಲಿದೆ.
NRRನಲ್ಲಿ ಆಸ್ಟ್ರೇಲಿಯಾ(-1.555) ಇರುವುದರಿಂದ ಇಂದಿನ ಪಂದ್ಯದಲ್ಲಿ ಸೋತರೆ ಮುಂದಿನ ಹಂತಕ್ಕೇರಲು ಕಷ್ಟವಾಗುತ್ತದೆ. ಆಸ್ಟ್ರೇಲಿಯಾ ತನ್ನ ಮುಂದಿನ ಪಂದ್ಯದಲ್ಲಿ ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳ ವಿರುದ್ಧ ಆಡಲಿದೆ. ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ಗೆದ್ದುಬೀಗಿದ್ದ ಇಂಗ್ಲೆಂಡ್, ನಂತರದಲ್ಲಿ ಸೋಲನುಭವಿಸುವ ಮೂಲಕ ಭಾರೀ ನಿರಾಸೆ ಕಂಡಿದೆ. ಈ ನಡುವೆ ಇಂಗ್ಲೆಂಡ್, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ಕಠಿಣ ಸವಾಲನ್ನ ಎದುರಿಸಲಿದೆ. ಹೀಗಾಗಿ ಎರಡು ತಂಡಕ್ಕೆ ಇಂದಿನ ಪಂದ್ಯದ ಫಲಿತಾಂಶ ಅತ್ಯಂತ ಮಹತ್ವದ್ದಾಗಿದೆ.
ಎರಡೂ ತಂಡಗಳಿಗೂ ಬ್ಯಾಟ್ಸಮನ್ಗಳ ಅಸ್ಥಿರ ಪ್ರದರ್ಶನದ್ದೇ ದೊಡ್ಡ ತಲೆನೋವಾಗಿದೆ. ಆಸೀಸ್ ಪರ ಡೇವಿಡ್ ವಾರ್ನರ್, ಮಾರ್ಷ್ ಹಾಗೂ ಮ್ಯಾಕ್ಸ್ವೆಲ್ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಮತ್ತೊಂದೆಡೆ ಇಂಗ್ಲೆಂಡ್ ತಂಡದ ಬ್ಯಾಟ್ಸ್ಮನ್ಗಳು ಸಹ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಬೌಲಿಂಗ್ನಲ್ಲಿ ಎರಡು ತಂಡಗಳು ಸಮಬಲದಿಂದ ಕೂಡಿವೆ. ಉಭಯ ತಂಡಗಳಿಗೂ ವೇಗದ ಬೌಲರ್ಗಳೇ ಪ್ರಮುಖ ಅಸ್ತ್ರವಾಗಿದ್ದಾರೆ.