ವಿಶ್ವ ಕ್ರಿಕೆಟ್(World Cricket)ನ ಚೇಸ್ ಮಾಸ್ಟರ್(Chase Master) ಎನಿಸಿರುವ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನ ಸೂಪರ್-12 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಅದ್ಭುತ ಬ್ಯಾಟಿಂಗ್‌ನಿಂದ ಟೀಮ್ ಇಂಡಿಯಾ(Team India)ಕ್ಕೆ ಗೆಲುವಿನ ಹೀರೋ ಆಗಿದ್ದರು.
ಸಂಕಷ್ಟದ ಸಂದರ್ಭದಲ್ಲಿ ಭಾರತದ ಬೆನ್ನೆಲುಬಾಗಿ ನಿಂತ ಕಿಂಗ್ ಕೊಹ್ಲಿ, 53 ಬಾಲ್‌ಗಳಲ್ಲಿ ಅಜೇಯ 82 ರನ್‌ಗಳಿಸುವ ಮೂಲಕ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು. ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಇಂತಹ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಬಂದಿರೋದು ಇದೇ ಮೊದಲಲ್ಲ. ಟಿ20 ಕ್ರಿಕೆಟ್‌ನಲ್ಲಿ ಈ ಹಿಂದೆಯೂ ಹಲವು ಪಂದ್ಯಗಳಲ್ಲಿ ಅಬ್ಬರಿಸಿರೋ ಕಿಂಗ್ ಕೊಹ್ಲಿ, ಅದ್ಭುತ ಆಟದಿಂದ ಟೀಂ ಇಂಡಿಯಾಕ್ಕೆ ಆಪತ್ಭಾಂಧವನಾಗಿ ಕೈಹಿಡಿದಿದ್ದಾರೆ.
ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನ 10 ಪಂದ್ಯಗಳಲ್ಲಿ ಚೇಸಿಂಗ್‌ನಲ್ಲಿ 541 ರನ್‌ಗಳಿಸಿದ್ದಾರೆ. ವಿಶ್ವದ ಎಲ್ಲಾ ರಾಷ್ಟ್ರಗಳ ವಿರುದ್ಧ ಅಬ್ಬರದ ಆಟವಾಡಿರುವ ಕೊಹ್ಲಿ ಚೇಸಿಂಗ್‌ನಲ್ಲಿ ಅತ್ಯುತ್ತಮ ಎನಿಸುವ 270.50 ಸರಾಸರಿ ಹೊಂದಿರುವುದು ಗಮನಾರ್ಹ. ಟಿ20 ಕ್ರಿಕೆಟ್‌ನ 10 ಪಂದ್ಯಗಳಲ್ಲಿ ಚೇಸಿಂಗ್‌ನಲ್ಲಿ 8 ಪಂದ್ಯಗಳಲ್ಲಿ ನಾಟೌಟ್ ಆಗಿರುವುದು ಕಿಂಗ್ ಕೊಹ್ಲಿಯ ಚಾಣಾಕ್ಷತೆಗೆ ಸಾಕ್ಷಿಯಾಗಿದೆ.
ಅಲ್ಲದೇ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ, ಚೇಸ್ ಮಾಡುವ ಸಂದರ್ಭದಲ್ಲಿ 7 ಅರ್ಧಶತಕಗಳನ್ನ ಸಿಡಿಸಿದ್ದು, 135.92 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇನ್ನೂ ಪಾಕಿಸ್ತಾನ ವಿರುದ್ಧದ ನಾಲ್ಕು ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಪಾಕಿಸ್ತಾನದ ವಿರುದ್ಧ ಚೇಸಿಂಗ್‌ನಲ್ಲಿ ಮೂರು ಅರ್ಧಶತಕ ಸಿಡಿಸಿದ್ದಾರೆ. ಚೇಸಿಂಗ್‌ನಲ್ಲಿ ವಿರಾಟ್ ಕೊಹ್ಲಿ ಅವರ ಗರಿಷ್ಠ ಸ್ಕೋರ್ 82 ರನ್‌ಗಳಾಗಿದ್ದು, 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ 82 ರನ್‌ಗಳಿಸಿದ್ದ ಕೊಹ್ಲಿ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಸಹ 82* ರನ್‌ಗಳಿಸಿದ್ದಾರೆ.