ತವರಿನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಸೋಲಿನ ಆರಂಭ ಕಂಡಿರುವ ಆಸ್ಟ್ರೇಲಿಯಾ, ಸ್ಟ್ರಾಂಗ್ ಕಮ್ ಬ್ಯಾಕ್ ಮಾಡುವ ಲೆಕ್ಕಾಚಾರದಲ್ಲಿದೆ. ನ್ಯೂಜಿ಼ಲೆಂಡ್(New Zealand) ವಿರುದ್ಧದ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ್ದ ಆಸೀಸ್, ಇಂದು ನಡೆಯುವ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯುವ ನಿರೀಕ್ಷೆ ಹೊಂದಿದೆ.
ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಸೂಪರ್-12 ಪಂದ್ಯಕ್ಕೆ ಪರ್ತ್ ಸ್ಟೇಡಿಯಂ(Perth Stadium) ಸಜ್ಜಾಗಿದೆ. ಆರನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರೆಟ್ ತಂಡವಾಗಿತ್ತು. ಆದರೆ ನ್ಯೂಜಿಲೆಂಡ್ ವಿರುದ್ಧ ಎದುರಾದ 89 ರನ್ಗಳ ಸೋಲು ಫಿಂಚ್ ಪಡೆಯ ನಿರೀಕ್ಷೆಗಳನ್ನೆಲ್ಲಾ ಹುಸಿಯಾಗಿಸಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ನಿರೀಕ್ಷಿತ ಆಟವಾಡುವಲ್ಲಿ ಆಸ್ಟ್ರೇಲಿಯಾ ಆಟಗಾರರು ವಿಫಲರಾದರು. ಹಿಂದಿನ ಪಂದ್ಯದ ಎಲ್ಲಾ ವೈಫಲ್ಯಗಳ ನಡುವೆಯೇ ಆಸ್ಟ್ರೇಲಿಯಾ ಸೂಪರ್-12 ಹಂತದ ತನ್ನ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ತಂಡದ ಚಾಲೆಂಜ್ ಎದುರಿಸೋಕ್ಕೆ ಸಜ್ಜಾಗಿದೆ.
ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ಗೆಲುವಿನ ಆರಂಭ ಪಡೆದಿರುವ ಶ್ರೀಲಂಕಾ ಆತ್ಮವಿಶ್ವಾಸದಲ್ಲಿದೆ. ಗ್ರೂಪ್ ಹಂತದಲ್ಲಿ ನಮೀಬಿಯಾ ವಿರುದ್ಧ ಸೋಲನುಭವಿಸಿದರು ನಂತರದಲ್ಲಿ ಬಲಿಷ್ಠ ಕಮ್ ಬ್ಯಾಕ್ ಮಾಡಿರುವ ಲಂಕಾ ಪಡೆ, ಐರ್ಲೆಂಡ್ ವಿರುದ್ಧ ಒಂಬತ್ತು ವಿಕೆಟ್ಗಳಿಂದ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಲಂಕಾ ಪಡೆಗೆ ಸ್ಪಿನ್ನರ್ಗಳೇ ಪ್ರಮುಖ ಅಸ್ತ್ರವಾಗಿದ್ದು, ಕಾಂಗರೂಗಳನ್ನ ಕಟ್ಟಿಹಾಕಲು ಶ್ರೀಲಂಕಾ ಕೂಡ ತನ್ನದೇ ರಣತಂತ್ರ ರೂಪಿಸಿಕೊಂಡು ತಯಾರಾಗಿದೆ.
ತಂಡಗಳ ಮುಖಾಮುಖಿ:
ಪಂದ್ಯಗಳು: 25
ಆಸ್ಟ್ರೇಲಿಯಾ ಗೆಲುವು: 14
ಶ್ರೀಲಂಕಾ ಗೆಲುವು: 10
ಟೈ: 1
ಆಸ್ಟ್ರೇಲಿಯಾ ನೆಲದಲ್ಲಿ:
ಪಂದ್ಯಗಳು – 14,
ಆಸ್ಟ್ರೇಲಿಯಾ ಗೆಲುವು – 7,
ಶ್ರೀಲಂಕಾ ಗೆಲುವು – 6, ಟೈ-1