T20 CWC 2022 ರಶೀದ್ ಖಾನ್(Rashid Khan) (48*) ಬಿರುಸಿನ ಬ್ಯಾಟಿಂಗ್ ನಡುವೆಯೂ ಅಫ್ಘಾನಿಸ್ತಾನ(Afghanistan) ವಿರುದ್ಧದ ಪಂದ್ಯದಲ್ಲಿ 4 ರನ್ಗಳ ಗೆಲುವು ಸಾಧಿಸಿದ ಆಸ್ಟ್ರೇಲಿಯಾ(Australia) ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್(Semi Final) ಪ್ರವೇಶದ ಕನಸನ್ನ ಜೀವಂತ ಇರಿಸಿಕೊಂಡಿದೆ. ಅಡಿಲೇಡ್ ಓವಲ್(Adelaide Oval)ನಲ್ಲಿ ನಡೆದ ಪಂದ್ಯದಲ್ಲಿ ಅತಿಥೇಯ ಆಸ್ಟ್ರೇಲಿಯಾ ದೊಡ್ಡ ಅಂತರದ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ಅಫ್ಘಾನಿಸ್ತಾನದ ಆಟಗಾರರ ನೀಡಿದ ಪ್ರಬಲ ಪೈಪೋಟಿಯಿಂದಾಗಿ ಗೆಲುವಿನ ಸಮಾಧಾನ ಕಂಡಿತು. ಆದರೆ ಸೆಮಿಫೈನಲ್ ರೇಸ್ನಲ್ಲಿ ಇನ್ನೂ ಜೀವಂತವಾಗಿರುವ ಕಾಂಗರೂ ಪಡೆ, ನಾಳೆ(ನ.5) ನಡೆಯಲಿರುವ ಶ್ರೀಲಂಕಾ v ಇಂಗ್ಲೆಂಡ್ ಪಂದ್ಯದ ಫಲಿತಾಂಶವನ್ನ ಎದುರು ನೋಡುತ್ತಿದೆ.
ಮ್ಯಾಕ್ಸ್ವೆಲ್ ಅರ್ಧಶತಕ:
ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆಸೀಸ್ 20 ಓವರ್ಗಳಲ್ಲಿ 8 ವಿಕೆಟ್ಗೆ 168 ರನ್ಗಳಿಸಿತು. ಆರಂಭಿಕಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್(25) ರನ್ಗಳಿಗೆ ವಿಕೆಟ್ ಒಪ್ಪಿಸಿದರೆ. ಆರನ್ ಫಿಂಚ್ ಬದಲಾಗಿ ತಂಡದಲ್ಲಿ ಸ್ಥಾನ ಪಡೆದ ಕೆಮರೂನ್ ಗ್ರೀನ್(3) ನಿರೀಕ್ಷಿತ ಆಟವಾಡಲಿಲ್ಲ. ಇವರ ಬೆನ್ನಲ್ಲೇ ಸ್ಟಿವ್ ಸ್ಮಿತ್(4) ರನ್ಗಳಿಸಿ ಪೆವಿಲಿಯನ್ ಸೇರಿದರು. ಆದರೆ ಜವಾಬ್ದಾರಿಯುತ ಆಟವಾಡಿದ ಮಿಚೆಲ್ ಮಾರ್ಷ್(45) ರನ್ಗಳಿಸಿದರೆ. ಮಾರ್ಕಸ್ ಸ್ಟಾಯ್ನಿಸ್(25) ಅಲ್ಪಮೊತ್ತ ಕಲೆಹಾಕಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಆಟವಾಡಿದ ಮ್ಯಾಕ್ಸ್ವೆಲ್, 32 ಬಾಲ್ಗಳಲ್ಲಿ 6 ಬೌಂಡರಿ, 2 ಸಿಕ್ಸ್ ನೆರವಿನಿಂದ ಅಜೇಯ 54 ರನ್ಗಳಿಸಿದರು. ಉಳಿದಂತೆ ಮ್ಯಾಥ್ಯೂ ವೇಡ್(6), ಕಮ್ಮಿನ್ಸ್(0) ಹಾಗೂ ರಿಚರ್ಡ್ಸ್ನ್(1) ರನ್ಗಳಿಸಿದರು. ಅಫ್ಘಾನ್ ಪರ ನವೀನ್-ಉಲ್-ಹಕ್ 3, ಫರೂಕಿ 2 ವಿಕೆಟ್ ಪಡೆದರು.
ರಶೀದ್ ಏಕಾಂಗಿ ಹೋರಾಟ:
ಆಸ್ಟ್ರೇಲಿಯಾದ 169 ರನ್ಗಳ ಟಾರ್ಗೆಟ್ ಚೇಸ್ ಮಾಡಿದ ಅಫ್ಘಾನಿಸ್ತಾನ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಆರಂಭಿಕನಾಗಿ ಬಂದ ಗುರ್ಬಾಜ್(30), ಜ಼ದ್ರಾನ್(26) ಹಾಗೂ ಗುಲ್ಬದಿನ್ ನೈಬ್(39) ರನ್ಗಳ ಉಪಯುಕ್ತ ರನ್ ಕಲೆಹಾಕಿದ್ದರು. ಒಂದು ಹಂತದಲ್ಲಿ 99 ರನ್ಗೆ 3 ವಿಕೆಟ್ ಕಳೆದುಕೊಂಡು ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಅಫ್ಘಾನ್, ಏಕಾಏಕಿ 3 ವಿಕೆಟ್ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಕಣಕ್ಕಿಳಿದ ರಶೀದ್ ಖಾನ್, 23 ಬಾಲ್ಗಳಲ್ಲಿ 3 ಬೌಂಡರಿ, 4 ಸಿಕ್ಸ್ ಮೂಲಕ 48* ರನ್ಗಳಿಸಿ ಗೆಲುವಿವಾಗಿ ಕೊನೆವರೆಗೂ ಹೋರಾಡಿದರರೂ ಕೇವಲ 4 ರನ್ಗಳಿಂದ ಸೋಲುಕಂಡಿತು. ಆಸ್ಟ್ರೇಲಿಯಾ ಪರ ಹೇಜ಼ಲ್ವುಡ್ ಹಾಗೂ ಜ್ಹಂಪ ತಲಾ 2 ವಿಕೆಟ್ ಪಡೆದರು.
ಲಂಕಾ ಗೆಲುವಿಗೆ ಆಸೀಸ್ ಪ್ರಾರ್ಥನೆ!
ಅಫ್ಘಾನಿಸ್ತಾನ ವಿರುದ್ಧ 4 ರನ್ಗಳ ಗೆಲುವು ಸಾಧಿಸಿದ ಆಸ್ಟ್ರೇಲಿಯಾಕ್ಕೆ ಸೆಮಿಫೈನಲ್ ಪ್ರವೇಶದ ಆಸೆ ಇನ್ನೂ ಜೀವಂತವಾಗಿದೆ. ಆದರೆ ಇದಕ್ಕಾಗಿ ಶ್ರೀಲಂಕಾ v ಇಂಗ್ಲೆಂಡ್ ಪಂದ್ಯದ ಫಲಿತಾಂಶ ಎದುರು ನೋಡುಬೇಕಿದೆ. ನಾಳಿನ ಪಂದ್ಯದಲ್ಲಿ ಲಂಕಾ ಗೆದ್ದರೆ ಆಸ್ಟ್ರೇಲಿಯಾ ಸೆಮಿಫೈನಲ್ ಕನಸು ನನಸಾಗಲಿದ್ದು, ಇಂಗ್ಲೆಂಡ್ ಗೆದ್ದರೆ ಫಿಂಚ್ ಪಡೆ ಟೂರ್ನಿಯಿಂದ ಹೊರ ಬೀಳಲಿದೆ. ಹೀಗಾಗಿ ಆಸೀಸ್ ಅಭಿಮಾನಿಗಳು ಲಂಕಾ ಗೆಲುವಿಗೆ ಪ್ರಾರ್ಥನೆ ಮಾಡುತ್ತಿದ್ದಾರೆ
ಇದನ್ನೂ ಓದಿ. – https://sportskarnataka.com/eng-vs-sl-t20-world-cup-2022/