ವಿಶ್ವ ಕ್ರಿಕೆಟ್(World Cricket)ನ ಚೇಸ್ ಮಾಸ್ಟರ್(Chase Master) ವಿರಾಟ್ ಕೊಹ್ಲಿ(Virat Kohli) T20 ಕ್ರಿಕೆಟ್‌ನಿಂದ ನಿವೃತ್ತಿಯಾಗಬೇಕಿದೆ ಎಂದು ಪಾಕಿಸ್ತಾನ(Pakistan)ದ ಮಾಜಿ ಕ್ರಿಕೆಟಿಗ ಶೊಯೆಬ್ ಅಖ್ತರ್(Shoaib Akhtar) ಬಯಸಿದ್ದಾರೆ.
ಟಿ20 ವಿಶ್ವಕಪ್(T20 World Cup)ನ ಸೂಪರ್-12 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಕೊಹ್ಲಿ ತೋರಿದ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನ ಇಡೀ ವಿಶ್ವವೇ ಕೊಂಡಾಡುತ್ತಿದೆ. ಅಂತೆಯೇ ಕೊಹ್ಲಿ ಅವರ ಆಟಕ್ಕೆ ಮಾಜಿ ಕ್ರಿಕೆಟಿಗ ಶೊಯೆಬ್ ಅಖ್ತರ್ ಕೂಡ ಬೆರಗಾಗಿದ್ದಾರೆ. ಕೊಹ್ಲಿ ಅವರ ಅಮೋಘ ಬ್ಯಾಟಿಂಗ್ ನಡುವೆಯೂ ʼವಿರಾಟ್ ಕೊಹ್ಲಿ ಟಿ20 ಅಂತರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿಯಾಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆಯನ್ನ ಕೂಡ ನೀಡಿರುವ ಶೊಯೆಬ್ ಅಖ್ತರ್, ಟೀಂ ಇಂಡಿಯಾದ ಬ್ಯಾಟಿಂಗ್ ಮಾಂತ್ರಿಕ(ಕೊಹ್ಲಿ) ತಮ್ಮ ಸಂಪೂರ್ಣ ಶಕ್ತಿಯನ್ನು T20 ಫಾರ್ಮೆಟ್‌ಗೆ ಮಾತ್ರವೇ ಬಳಸಿಕೊಳ್ಳಬಾರದು. “ನನ್ನ ಪ್ರಕಾರ, ಅವರು(ವಿರಾಟ್ ಕೊಹ್ಲಿ) ಪಾಕಿಸ್ತಾನದ ವಿರುದ್ಧ ತಮ್ಮ ಜೀವನದ ಶ್ರೇಷ್ಠ ಇನ್ನಿಂಗ್ಸ್ ಆಡಿದ್ದಾರೆ. ಕೊಹ್ಲಿ ತಮ್ಮ ಬ್ಯಾಟಿಂಗ್ ವೇಳೆ ಚೇಸ್ ಮಾಡುವ ಆತ್ಮವಿಶ್ವಾಸದಿಂದಲೇ ಆಡಿದರು. ಹೀಗಾಗಿ ಟಿ20 ಕ್ರಿಕೆಟ್‌ನಿಂದ ನಿವೃತ್ತರಾಗಬೇಕೆಂದು ನಾನು ಬಯಸುತ್ತೇನೆ ಎಂದು ಮಾಜಿ ಕ್ರಿಕೆಟಿಗನ ಇಂಗಿತ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು T20I ಕ್ರಿಕೆಟ್‌ಗಾಗಿ ಮಾತ್ರವೇ ಹಾಕುವುದನ್ನ ನಾನು ಬಯಸುವುದಿಲ್ಲ. ಇದೇ ಆತ್ಮವಿಶ್ವಾಸ ಹಾಗೂ ಸಾಮರ್ಥ್ಯದಿಂದ ಅವರು ODI ಪಂದ್ಯಗಳಲ್ಲಿ ಆಡಿದರೆ ಮೂರು ಶತಕ ಗಳಿಸಬಹುದು ಎಂದು ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿರುವ ಶೊಯೆಬ್ ಅಖ್ತರ್, 3 ವರ್ಷಗಳಿಂದ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ ಅವರು ನಾಯಕತ್ವದಿಂದ ಕೆಳಗಿಳಿದಿದ್ದರು. ಆದರೆ ಪಾಕಿಸ್ತಾನದ ವಿರುದ್ಧ ಅವರು ಆಡಿದ ರೀತಿ ಕಮ್‌ಬ್ಯಾಕ್‌ಗೆ ಸೂಕ್ತವಾಗಿದೆ. “ರಾಜ ಮರಳಿ ಬಂದಿದ್ದು, ಅಬ್ಬರದಿಂದ ಹಿಂತಿರುಗಿದ್ದಾರೆ” ಅವರ ಕಮ್ ಬ್ಯಾಕ್ ಬಗ್ಗೆ ನನಗೆ ಸಂತೋಷವಾಗಿದೆ. ವಿರಾಟ್ ಕೊಹ್ಲಿ ಶ್ರೇಷ್ಠ ಕ್ರಿಕೆಟಿಗ ಎಂದು ಪಾಕಿಸ್ತಾನದ ವೇಗಿ ಬಣ್ಣಿಸಿದ್ದಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ, ಏಕಾಂಗಿಯಾಗಿ ನಿಂತು ಹೋರಾಡುವ ಮೂಲಕ ಟೀಂ ಇಂಡಿಯಾಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟಿದ್ದರು.