Syed Mushtaq ಸರ್ಫರಾಜ್ ಖಾನ್ ಹಾಗೂ ತನುಷ್ ಕೋಟ್ಯಾನ್ ಅವರ ಅಮೋಘ ಪ್ರದರ್ಶನದಿಂದ ಮಂಬೈ ಕ್ರಿಕೆಟ್ ತಂಡ ಚೊಚ್ಚಲ ಸಯ್ಯದ್ ಮುಷ್ತಾಕ್ ಟಿ20 ಟೂರ್ನಿ ಮುಡಿಗೇರಿಸಿಕೊಂಡಿದೆ.
ಕೋಲ್ಕತ್ತಾದ ಈಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹಿಮಾಚಲ ಪ್ರದೇಶ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತು. ಮುಂಬೈ ತಂಡ 19.3 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತು.
144 ರನ್ಗಳ ಸವಾಲಿನ ಮೊತ್ತ ಬೆನ್ನತ್ತಿದ ಮುಂಬೈ ಪರ ಯಶಸ್ವಿ ಜೈಸ್ವಾಲ್ 27, ಶ್ರೇಯಸ್ ಅಯ್ಯರ್ 34, ಸರ್ಫರಾಜ್ ಖಾನ್ ಅಜೇಯ 36, ತನುಷ್ ಕೋಟ್ಯಾನ್ ಅಜೇಯ 10 ರನ್ ಗಳಿಸಿದರು.
ಹಿಮಾಚಲ ಪರ ವೈಭವ್ ಅರೊರಾ 27ಕ್ಕೆ 3 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಹಿಮಾಚಲ ಪರ ಏಕಾಂತ್ ಸೇನ್ 37, ಆಕಾಶ್ ವಸಿಷ್ಠ್ 25, ನಿಕಿಲ್ 22 ರನ್ ಕಲೆ ಹಾಕಿದರು. ತನುಷ್ ಕೋಟ್ಯಾನ್ 15ಕ್ಕೆ 3 ವಿಕೆಟ್ ,ಮೋಹಿತ್ ಅವಸ್ತಿ 21ಕ್ಕೆ 3 ವಿಕೆಟ್ ಪಡೆದು ಮಿಂಚಿದರು.