ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕರ್ನಾಟಕ ತಂಡ ಪಂಜಾಬ್ ವಿರುದ್ಧ 9 ರನ್ಗಳ ವಿರೋಚಿತ ಸೋಲು ಅನುಭವಿಸಿದೆ.ಮಯಾಂಕ್ ಪಡೆ ಟೂರ್ನಿಯಿಂದ ಹೊರ ಬಿದ್ದಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂಜಾಬ್ ವಿರುದ್ಧದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 225 ರನ್ ಕಲೆ ಹಾಕಿತು. ಕರ್ನಾಟಕ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 216 ರನ್ ಕಲೆ ಹಾಕುವಲ್ಲಿ ಮಾತ್ರ ಯಶಸ್ವಿಯಾಯಿತು.
226 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ಕರ್ನಾಟಕ ತಂಡಕ್ಕೆ ಅಗ್ರ ಬ್ಯಾಟರ್ಗಳು ಉತ್ತಮ ಆರಂಭ ಕೊಡುವಲ್ಲಿ ಎಡವಿದರು. ನಾಯಕ ಮಯಾಂಕ್ ಅಗರ್ವಾಲ್ 8, ರೋಹನ್ ಪಾಟೀಲ್ 2, ಲುವಿನಿತ್ ಸಿಸೋಡಿಯಾ 6, ಎಲ್.ಆರ್.ಚೇತನ್ 33 ರನ್, ಮನೀಷ್ ಪಾಂಡೆ 45, ಅಭಿನವ್ ಮನೋಹರ್ 62 ರನ್ (29 ಎಸೆತ 5 ಬೌಂಡರಿ 5 ಸಿಕ್ಸರ್), ಮನೋಜ್ ಭಂಡಾಜೆ 25, ಕೆ.ಗೌತಮ್ ಅಜೇಯ 30 ರನ್ ಗಳಿಸಿದರು.
ಕೊನೆಯ ಓವರ್ನಲ್ಲಿ ಕರ್ನಾಟಕಕ್ಕೆ ಗೆಲ್ಲಲು 26 ರನ್ ಬೇಕಿತ್ತು. ಕ್ರೀಸ್ನಲ್ಲಿದ್ದ ಮನೋಹರ್ 2 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸುವಲ್ಲಿ ಮಾತ್ರ ಯಶಸ್ವಿಯಾದರು.
ಪಂಜಾಬ್ ಪರ ರಮಣದೀಪ್ 26ಕ್ಕೆ 2, ಸಿದ್ದಾರ್ಥ್ ಕೌಲ್,ಬಲ್ತೇಜ್ ಸಿಂಗ್, ಅಶ್ವಾಣಿ ಕುಮಾರ್ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಪಂಜಾಬ್ ಪರ ಅಭಿಷೇಕ್ ಶರ್ಮಾ 4, ಶುಭಮನ್ ಗಿಲ್ 126 ರನ್ ( 55 ಎಸೆತ, 11 ಬೌಂಡರಿ, 9 ಸಿಕ್ಸರ್ ) ಹೊಡೆದರು. ಪ್ರಭಸಿಮ್ರಾನ್ ಸಿಂಗ್ 4 ರನ್, ಅನಮೋಲ್ ಪ್ರೀತ್ ಸಿಂಗ್ 59 ರನ್ ( 43 ಎಸೆತ , 9 ಬೌಂಡರಿ),ಸನ್ವಿರ್ ಸಿಂಗ್ 27 ರನ್ ಕಲೆಹಾಕಿದರು. ವಿದ್ವತ್ ಕಾವೇರಪ್ಪ 44ಕ್ಕೆ 3 ವಿಕೆಟ್ ಪಡೆದರು.