Syed Mushtaq Ali Trophy ವೇಗಿ ವಿಜಯ್ ಕುಮಾರ್ ವೈಶಾಕ್ ಅವರ ಮಾರಕ ದಾಳಿ ಹಾಗೂ ಓಪನರ್ ಚೇತನ್ ಅವರ ಅರ್ಧ ಶತಕ ನೆರೆವಿನಿಂದ ಕರ್ನಾಟಕ ತಂಡ ಸರ್ವಿಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಮುಲಾನ್ಪುರ ಮೈದಾನದಲ್ಲಿ ನಡೆದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮೊದಲು ಬ್ಯಾಟ್ ಮಾಡಿದ ಸರ್ವಿಸ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 129 ರನ್ ಕಲೆ ಹಾಕಿತು. ಕರ್ನಾಟಕ ತಂಡ 18.1 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 130 ರನ್ ಕಲೆ ಹಾಕಿತು.
130 ರನ್ ಗುರಿ ಬೆನ್ನತ್ತಿದ ಕರ್ನಾಟಕ ತಂಡದ ಪರ ಎಲ್.ಆರ್.ಚೇತನ್ ಅಜೇಯ 61 (52 ಎಸೆತ, 6 ಬೌಂಡರಿ, 1 ಸಿಕ್ಸರ್).
ನಾಯಕ ಮಯಾಂಕ್ ಅಗರ್ವಾಲ್ 16, ಲುವಿನಿತ್ ಸಿಸೋಡಿಯಾ 7, ಮನೀಶ್ ಪಾಂಡೆ ಅಜೇಯ 37 ರನ್ ಕಲೆ ಹಾಕಿದರು. ರೈಲ್ವೇಸ್ ಪುಲಕೀತ್ ಹಾಗೂ ಮೋಹಿತ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಸರ್ವೀಸ್ ಪರ ರಾಹುಲ್ ಸಿಂಗ್ 22,ಅನುಶಾಲ್ ಗುಪ್ತಾ 7,ರಜತ್ ಪಾಲಿವಾಲ್ 7, ಅಮಿತ್ ಪಚ್ಚಾರಾ 35, ಪಾರ್ತ್ ರೇಖಾಡೆ 16, ದೇವೆಂದರ್ 13 ರನ್ ಕಲೆ ಹಾಕಿದರು.
ಕರ್ನಾಟಕ ಪರ ವೈಶಾಕ್ 24ಕ್ಕೆ 3, ಕೆ.ಗೌತಮ್ 13ಕ್ಕೆ 2, ಸುಚೀತ್ ಹಾಗೂ ಮನೋಜ್ ಭಂಡಾಜೆ ತಲಾ 1 ವಿಕೆಟ್ ಪಡೆದರು.