ಸಯ್ಯದ್ ಮೋದಿ ಇಂಟರ್ ನ್ಯಾಷನಲ್ ಬ್ಯಾಡ್ಮಿಂಟನ್ – ಎರಡನೇ ಸುತ್ತು ಪ್ರವೇಶಿಸಿದ ಪಿ.ವಿ. ಸಿಂಧೂ..!
ಸಯ್ಯದ್ ಮೋದಿ ಇಂಟರ್ ನ್ಯಾಷನಲ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಪಿ.ವಿ. ಸಿಂಧೂ ಅವರು ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಬಾಬು ಬನರಾಸಿ ದಾಸ್ ಇಂಡೋರ್ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಪಿ.ವಿ. ಸಿಂಧೂ ಅವರು 21-9, 21-9ರಿಂದ ತನ್ಯಾ ಹೇಮಂತ್ ಅವರನ್ನು ಸುಲಭವಾಗಿ ಮಣಿಸಿದ್ರು.
ಎರಡು ಬಾರಿ ಒಲಿಂಪಿಕ್ಸ್ ಪದಕ ಗೆದ್ದಿರುವ ಪಿ.ವಿ. ಸಿಂಧೂ ಅವರು ಕಳೆದ ವಾರ ನಡೆದ ಇಂಡಿಯನ್ ಓಪನ್ ಸೂಪರ್ 500 ಸಿರೀಸ್ ನ ಸೆಮಿಫೈನಲ್ ನಲ್ಲಿ ಸೋಲು ಅನುಭವಿಸಿದ್ದರು.
ಎರಡನೇ ಸುತ್ತಿನ ಪಂದ್ಯದಲ್ಲಿ ಪಿ.ವಿ. ಸಿಂಧೂ ಅವರು ಅಮೆರಿಕಾದ ಲಾರೆನ್ ಲಾಮ್ ಅವರನ್ನು ಎದುರಿಸಲಿದ್ದಾರೆ. ಲಾರೆನ್ ಲಾಮ್ ಅವರು 15-21, 21-16, 21-16ರಿಂದ ಐರಾ ಶರ್ಮಾ ಅವರನ್ನು ಸೋಲಿಸಿದ್ದರು.
ಮಹಿಳೆಯರ ಇನ್ನೊಂದು ಸಿಂಗಲ್ಸ್ ನಲ್ಲಿ ಭಾರತ ಕನಿಕಾ ಕನ್ವಾಲ್ ಅವರು 21-15, 16-21, 21-6ರಿಂದ ದಿಶಾ ಗುಪ್ತಾ ಅವರನ್ನು ಸೋಲಿಸಿದ್ರು.