ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿ – ಪ್ರಶಸ್ತಿಗಾಗಿ ಸಿಂಧೂ ಮತ್ತು ಮಾಲ್ವಿಕಾ ಬಂಸೋದ್ ಫೈಟ್
ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ, ಮಾಜಿ ವಿಶ್ವ ಚಾಂಪಿಯನ್ ಭಾರತದ ಪಿ.ವಿ. ಸಿಂಧೂ ಅವರು ಸಯ್ಯದ್ ಮೋದಿ ಇಂಟರ್ ನ್ಯಾಷನಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಪಿ.ವಿ. ಸಿಂಧೂ ಮತ್ತು ರಷ್ಯಾದ ಐದನೇ ಶ್ರೇಯಾಂಕಿತೆ ಎವ್ಗೆನಿಯಾ ಕೊಸೆಟ್ಸ್‍ಕಾಯಾ ಅವರು ಹೋರಾಟ ನಡೆಸುತ್ತಿದ್ದರು. ಈ ವೇಳೆ ಎವ್ಗೆನಿಯಾ ಅವರು ಪಂದ್ಯದಿಂದ ರಿಟರ್ಡ್ ಹರ್ಟ್ ಆಗಿ ಹೊರನಡೆದ್ರು. ಹೀಗಾಗಿ ಸಿಂಧೂ ಅವರು ಸುಲಭವಾಗಿ ಫೈನಲ್ ಗೆ ಎಂಟ್ರಿಯಾದ್ರು.
ಟೂರ್ನಿಯಲ್ಲಿ ಅಗ್ರ ಶ್ರೇಯಾಂಕಿತೆಯಾಗಿರುವ ಪಿ.ವಿ. ಸಿಂಧೂ ಅವರು ಮೊದಲ ಸೆಟ್ ಅನ್ನು 21-11ರಿಂದ ಗೆದ್ದುಕೊಂಡಿದ್ದರು.
ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸಿಂಧೂ ಅವರು ಮಾಲ್ವಿಕಾ ಬಂಸೋದ್ ಅವರನ್ನು ಎದುರಿಸಲಿದ್ದಾರೆ.
ಮಾಲ್ವಿಕಾ ಬಂಸೋದ್ ಅವರು ಸೆಮಿಫೈನಲ್ ನಲ್ಲಿ ಭಾರತದ ಅನುಪಮಾ ಉಪಾಧ್ಯಾಯ ಅವರನ್ನು 19-21, 21-19, 21-7 ರಿಂದ ಸೋಲಿಸಿದ್ದರು.