Suryakumar ಟೀಮ್ ಇಂಡಿಯಾ ಸೂಪರ್ 12ರ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 71 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಜಿಂಬಾಬ್ವೆ ವಿರುದ್ಧ ಭಾರೀ ಅಂತರದಿಂದ ಗೆಲ್ಲಲು ಸಾಧ್ಯವಾಗಿದ್ದು ಟೀಮ್ ಇಂಡಿಯಾದ ಮಿಸ್ಟರ್ 360 ಸೂರ್ಯ ಕುಮಾರ್. ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯ ಕುಮಾರ್ ರನ್ ಶಿಕಾರಿ ಮಾಡಿದರು. 25 ಎಸೆತಗಳಲ್ಲಿ 6 ಬೌಂಡರಿ 4 ಸಿಕ್ಸರ್ ಸಿಡಿಸಿ ಅಜೇಯ 61 ರನ್ ಕಲೆ ಹಾಕಿದರು.
ಸೂರ್ಯ ಕುಮಾರ್ ಬ್ಯಾಟಿಂಗ್ ನೆರವಿನಿಂದ ಭಾರತ 5 ವಿಕೆಟ್ ನಷ್ಟಕ್ಕೆ 186 ರನ್ ಪೇರಿಸಲು ಸಾಧ್ಯವಾಯಿತು.
ಸೂರ್ಯ ಕುಮಾರ್ ದಾಖಲೆಯನ್ನು ಬರೆದರು. ಕ್ಯಾಲೆಂಡರ್ ವರ್ಷದಲ್ಲಿ ಟಿ20ಯಲ್ಲಿ ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟರ್ ಆಗಿದ್ದಾರೆ. ಜೊತೆಗೆ ವಿಶ್ವದ ಸಾಧನೆ ಮಾಡಿದ ವಿಶ್ವದ ಎರಡನೆ ಬ್ಯಾಟರ್ ಎನಿಸಿದ್ದಾರೆ.
ಸೂರ್ಯ ಕುಮಾರ್ ಈ ವರ್ಷ ಟಿ20ಯಲ್ಲಿ 28 ಇನ್ನಿಂಗ್ಸ್ ಗಳಿಂದ
1020 ರನ್ ಕಲೆ ಹಾಕಿದ್ದಾರೆ. 2021ರಲ್ಲಿ ಪಾಕ್ನ ಮೊಹ್ಮದ್ ರಿಜ್ವಾನ್ 26 ಇನ್ನಿಂಗ್ಸ್ ಗಳಿಂದ 1,326 ರನ್ ಕಲೆ ಹಾಕಿದ್ದರು.