Foreign league ಭಾರತದ ಮಾಜಿ ಕ್ರಿಕೆಟಿಗ ಮತ್ತು CSK ತಂಡದ ಮಾಜಿ ಸ್ಟಾರ್ ಆಟಗಾರ ಸುರೇಶ್ ರೈನಾ, ಮತ್ತೊಂದು ಟೂರ್ನಿಯತ್ತ ಮುಖಮಾಡಿದ್ದಾರೆ. ನಿವೃತ್ತಿ ಬಳಿಕ ಈಗಾಗಲೇ ರೋಡ್ ಸೇಫ್ಟಿ ಲೀಗ್‌ನಲ್ಲಿ ಆಡಿದ್ದ ರೈನಾ, ಇದೀಗ ಅಬುಧಾಬಿ T10 ಲೀಗ್ 2022ರಲ್ಲಿ ಭಾಗಿಯಾಗಲಿದ್ದಾರೆ.
ಈ ವರ್ಷದ ಆರಂಭದಲ್ಲಿ ಅವರು ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದರಿಂದಾಗಿ ರೈನಾ ವಿದೇಶಿ ಫ್ರಾಂಚೈಸಿಗಳ ಪರ ಆಡಲು ಅರ್ಹರಾಗಿದ್ದಾರೆ. ಹೀಗಾಗಿ, ಮುಂದಿನ ವರ್ಷ ಅಬುಧಾಬಿಯಲ್ಲಿ ನಡೆಯಲಿರುವ ಟಿ10 ಲೀಗ್ 2022ಕ್ಕಾಗಿ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡದೊಂದಿಗೆ ಸಹಿ ಹಾಕಿದ್ದಾರೆ.
ಈ ಕುರಿತು ಲೀಗ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮಂಗಳವಾರ ಸುದ್ದಿ ಪ್ರಕಟಿಸಿದೆ. ‘ಟೀಂ ಇಂಡಿಯಾ ವಿಶ್ವಕಪ್ ವಿಜೇತ ರೈನಾ ಅವರು ಡೆಕ್ಕನ್ ಗ್ಲಾಡಿಯೇಟರ್ಸ್ ತಂಡಕ್ಕೆ ಸಹಿ ಹಾಕಿದ್ದಾರೆ. ಭಾರತದ ಸಾರ್ವಕಾಲಿಕ ಅತ್ಯುತ್ತಮ ವೈಟ್ ಬಾಲ್ ಆಟಗಾರರಲ್ಲಿ ಒಬ್ಬರಾದ ರೈನಾ ಮೊದಲ ಬಾರಿಗೆ ಅಬುಧಾಬಿ ಟಿ10 ಲೀಗ್‌ನಲ್ಲಿ ಆಡುತ್ತಾರೆ ಮತ್ತು ನಾವು ಕಾಯಲು ಸಾಧ್ಯವಿಲ್ಲ’ ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಉತ್ತರ ಪ್ರದೇಶ ಮೂಲಕ ಸುರೇಶ್ ರೈನಾ, ಭಾರತದ ಪರ 13 ವರ್ಷ ಆಡಿದ್ದರು. 18 ಟೆಸ್ಟ್‌ಗಳು, 226 ಏಕದಿನ ಪಂದ್ಯಗಳು ಮತ್ತು 78 ಟಿ20 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. 226 ಏಕದಿನ ಪಂದ್ಯಗಳಿಂದ 35.31 ಸರಾಸರಿಯಲ್ಲಿ 5615 ರನ್ ಗಳಿಸಿದ್ದಾರೆ. 78 ಟಿ20 ಪಂದ್ಯಗಳಲ್ಲಿ ಎಡಗೈ ಆಟಗಾರ, 29.18ರ ಸರಾಸರಿಯಲ್ಲಿ 1,605 ರನ್ ಗಳಿಸಿದ್ದಾರೆ. 18 ಟೆಸ್ಟ್‌ಗಳಲ್ಲಿ 768 ರನ್ ಗಳಿಸಿದ್ದರು.
ಮಿಸ್ಟರ್ ಐಪಿಎಲ್ ಎಂದೇ ಖ್ಯಾತಿ ಪಡೆದಿದ್ದ ಅವರು, 205 ಪಂದ್ಯಗಳಲ್ಲಿ 39 ಅರ್ಧ ಶತಕಗಳ ನೆರವಿನಿಂದ 5,528 ರನ್ ಗಳಿಸಿದ್ದಾರೆ.
ಇದನ್ನೂ ಓದಿ https://sportskarnataka.com/india-vs-banglad…ort-probable-xis/