ಹೈಲೈಟ್:
ಇಂಡಿಯನ್ ಪ್ರೀಮಿಯರ್ ಲೀಗ್ ಪುಣೆಗೆ ಎಂಟ್ರಿ ಕೊಡುತ್ತಿದೆ. ಮುಬೈನ ವಾಂಖೆಡೆಸ, ಡಿ.ವೈ. ಪಾಟೀಲ್ ಮತ್ತು ಬ್ರೆಬೊರ್ನ್ ಮೈದಾನದಲ್ಲಿ ಝಲಕ್ ತೋರಿದ ಬಳಿಕ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಗ್ರೌಂಡ್ನಲ್ಲಿ ಪಂದ್ಯ ನಡೆಯಲಿದೆ. ಮಾಜಿ ಚಾಂಪಿಯನ್ಗಳಾದ ಸನ್ ರೈಸರ್ಸ್ ಹೈದ್ರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ನಡುವೆ ಗೆಲುವಿಗಾಗಿ ಫೈಟ್ ನಡೆಯಲಿದೆ.
ಕಾಂಬಿನೇಷನ್ ಲೆಕ್ಕಾಚಾರ:
ಎರಡೂ ತಂಡಗಳಿಗೂ ಆಟಗಾರರ ಕೊರತೆ ಇಲ್ಲ. ಆದರೆ ಸರಿಯಾದ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವುದೇ ಸಮಸ್ಯೆ. ಕೆಲವೊಮ್ಮೆ ಸಂಪನ್ಮೂಲಗಳು ಹೆಚ್ಚಾದರೆ ಯಾರನ್ನು ತಪ್ಪು ಆಯ್ಕೆಗಳೇ ಹೆಚ್ಚಾಗುತ್ತವೆ. ಎಸ್ಆರ್ಎಚ್ ಮತ್ತು ಆರ್. ಆರ್. ಪರಿಸ್ಥಿತಿಯೂ ಹಾಗೇಯೇ ಆಗಿದೆ.s
ಸನ್ ರೈಸರ್ಸ್ ತಂಡ ಟಾಪ್ ಟು ಬಾಟಮ್ ಲೆಫ್ಟ್-ರೈಟ್ ಕಾಂಬಿನೇಷನ್ ಇಟ್ಟುಕೊಳ್ಳಲಿದೆ. ಅಷ್ಟೇ ಅಲ್ಲ ಆಲ್ರೌಂಡರ್ಗಳ ದಂಡೇ ಇದೆ. ಅಭಿಷೇಕ್ ಶರ್ಮಾ ಮತ್ತು ರಾಹುಲ್ ತ್ರಿಪಾಠಿ ಇನ್ನಿಂಗ್ಸ್ ಆರಂಭಿಸಿದರೆ, ಕೇನ್ ವಿಲಿಯಮ್ಸನ್ ಮೂರನೇ ಕ್ರಮಾಂಕಕ್ಕೆ ಸ್ಥಿರತೆ ಕೊಡಬಹುದು. ಇಲ್ಲ ತ್ರಿಪಾಠಿಯನ್ನು ಕೆಳಕ್ಕಿಳಿಸಿ, ವಿಲಿಯಮ್ಸನ್ ಆರಂಭದಲ್ಲಿ ಪ್ಯಾಡ್ ಕಟ್ಟುವ ಅವಕಾಶವೂ ಇದೆ. ನಿಕೊಲಸ್ ಪೂರ್ ಮತ್ತು ಗ್ಲೆನ್ ಫಿಲಿಪ್ಸ್ ಮಧ್ಯಮ ಸರದಿಯ ಸ್ಪೋಟಕ ಬ್ಯಾಟರ್ಗಳು. ರೊಮರಿಯೋ ಶೆಫರ್ಡ್ ಮತ್ತು ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಜೊತೆ ಬೌಲಿಂಗ್ ಕೂಡ ಮಾಡಬಲ್ಲರು. ಶ್ರೇಯಸ್ ಗೋಪಾಲ್ ಲೆಗ್ ಸ್ಪಿನ್ ಸ್ಪೆಷಲಿಸ್ಟ್. ಭುವನೇಶ್ವರ್ ಕುಮಾರ್, ಟಿ. ನಟರಾಜನ್ ಮತ್ತು ಉಮ್ರನ್ ಮಲಿಕ್ ಫಾಸ್ಟ್ ಬೌಲರ್ಗಳು.
ರಾಜಸ್ಥಾನ ರಾಯಲ್ಸ್ ಕೂಡ ಸಖತ್ ಕಾಂಬಿನೇಷನ್ ಹೊಂದಿದೆ. ಯಶಸ್ವಿ ಜೈಸ್ವಾಲ್ ಮತ್ತು ದೇವ್ ದತ್ ಪಡಿಕಲ್ ಇನ್ನಿಂಗ್ಸ್ ಆರಂಭಿಸಬಹುದು. ಅಥವಾ ಜೋಸ್ ಬಟ್ಲರ್ ಟಾಪ್ ಆರ್ಡರ್ಗೆ ಬಂದರೆ ಜೈಸ್ವಾಲ್ ಕೆಳ ಸರದಿಯಲ್ಲಿ ಆಡಬೇಕಾಗುತ್ತದೆ. ಸಂಜು ಸ್ಯಾಮ್ಸನ್, ಶಿಮ್ರನ್ ಹೆಟ್ಮಯರ್ ಮಧ್ಯಮ ಸರದಿಯಲ್ಲಿದ್ದಾರೆ. ರಿಯನ್ ಪರಾಗ್ ಮತ್ತು ಡೆರೆಲ್ ಮಿಚೆಲ್ ಬ್ಯಾಟಿಂಗ್ ಕಂ ಬೌಲಿಂಗ್ ಮಾಡಬಲ್ಲರು. ಅಶ್ವಿನ್ ಆಫ್ ಸ್ಪಿನ್ನರ್. ನವ್ದೀಪ್ ಸೈನಿ, ಪ್ರಸಿಧ್ ಕೃಷ್ಣ ಮತ್ತು ಟ್ರೆಂಟ್ ಬೋಲ್ಟ್ ಫಾಸ್ಟ್ ಬೌಲಿಂಗ್ ಸ್ಪೆಷಲಿಸ್ಟ್ಗಳು.
ಏನಾಗಬಹುದು..?
ಎರಡೂ ತಂಡಗಳಲ್ಲೂ ಸ್ಪೋಟಕ ಆಟಗಾರರ ದಂಡೇ ಇರುವುದರಿಂದ ಬ್ಯಾಟಿಂಗ್ ಪಿಚ್ ಸಿಕ್ಕರೆ ಬೌಲರ್ಗಳು ಪರದಾಡಬಹುದು. ಒಂದು ವೇಳೆ ಬೌಲಿಂಗ್ಗೆ ನೆರವು ಸಿಕ್ಕಿದರೆ ಬ್ಯಾಟ್ಸ್ಮನ್ಗಳ ಅಗ್ನಿ ಪರೀಕ್ಷೆಯಾಗಲಿದೆ. ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಲೆಗ್ ಸ್ಪಿನ್ನರ್ ಒಬ್ಬನ ಕೊರತೆ ಕಾಣುತ್ತಿದೆ. ಅದು ಬಿಟ್ಟರೇ ಎರಡೂ ತಂಡಗಳು ಗಟ್ಟಿಯಾಗಿ ಕಾಣುತ್ತಿವೆ.