ಸತತ ಎರಡು ಸೋಲಿನನಿಂದ ಕಂಗೆಟ್ಟಿದ್ದ ಸನ್ರೈಸರ್ಸ್ ಹೈದ್ರಾಬಾದ್, ಬಲಿಷ್ಠ ಕಮ್ಬ್ಯಾಕ್ನೊಂದಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಆ ಮೂಲಕ 15ನೇ ಆವೃತ್ತಿಯಲ್ಲಿ ನಿಧಾನವಾಗಿ ತನ್ನ ಪ್ರಾಬಲ್ಯ ಸಾಧಿಸುತ್ತಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ನೀಡಿದ ಸನ್ರೈಸರ್ಸ್, ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಬಲಿಷ್ಠ ಪ್ರದರ್ಶನ ನೀಡಿತು. ಕೆಕೆಆರ್ ತಂಡವನ್ನು 20 ಓವರ್ಗಳಲ್ಲಿ 175/8 ರನ್ಗಳಿಗೆ ಕಡಿವಾಣ ಹಾಕಿದ ಸನ್ರೈಸರ್ಸ್, 17.5 ಓವರ್ನಲ್ಲಿ 176/3 ಗುರಿ ಮುಟ್ಟುವ ಮೂಲಕ 7 ವಿಕೆಟ್ಗಳ ಗೆಲುವು ಸಾಧಿಸಿತು. ಆ ಮೂಲಕ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ತ್ರಿಪಾಠಿ-ಮಾರ್ಕ್ರಂ ಅಬ್ಬರ:
ಕೆಕೆಆರ್ ನೀಡಿದ 176 ರನ್ಗಳ ಟಾರ್ಗೆಟ್ ಬೆನ್ನತ್ತಿದ ಹೈದ್ರಾಬಾದ್ಗೆ ರಾಹುಲ್ ತ್ರಿಪಾಠಿ 71 ರನ್(37 ಬಾಲ್, 4 ಬೌಂಡರಿ, 6 ಸಿಕ್ಸ್) ಹಾಗೂ ಐಡೆನ್ ಮಾರ್ಕ್ರಂ 68* ರನ್(36 ಬಾಲ್, 6 ಬೌಂಡರಿ, 4 ಸಿಕ್ಸ್) ಮೂಲಕ ತಂಡಕ್ಕೆ ಆಸರೆಯಾದರು. ಈ ಇಬ್ಬರು ಆಟಗಾರರು ಕೆಕೆಆರ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವ ಮೂಲಕ 3ನೇ ವಿಕೆಟ್ಗೆ 94 ರನ್ಗಳಿಸುವ ಮೂಲಕ ಸನ್ರೈಸರ್ಸ್ ತಂಡಕ್ಕೆ ಹ್ಯಾಟ್ರಿಕ್ ಗೆಲುವು ತಂದುಕೊಟ್ಟರು. ಉಳಿದಂತೆ ಸನ್ರೈಸರ್ಸ್ ಪರ ಅಭಿಷೇಕ್ ಶರ್ಮ(3), ಕೇನ್ ವಿಲಿಯಂಸನ್(17) ಹಾಗೂ ಪೂರನ್(5*) ರನ್ಗಳಿಸಿದರು. ಕೆಕೆಆರ್ ಪರ ರಸೆಲ್(2/20), ಕಮ್ಮಿನ್ಸ್ (1/40) ಯಶಸ್ವಿ ಬೌಲಿಂಗ್ ದಾಳಿ ನಡೆಸಿದರು.
ಆಸರೆಯಾದ ರಾಣಾ-ರಸೆಲ್:
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್, ಉತ್ತಮ ಆರಂಭ ಪಡೆಯಲಿಲ್ಲ. ವೆಂಕಟೇಶ್ ಅಯ್ಯರ್(6), ಆರನ್ ಫಿಂಚ್(7) ಬಹುಬೇಗನೆ ನಿರ್ಗಮಿಸಿದರು. ಆದರೆ ನಂತರ ಬಂದ ನಾಯಕ ಶ್ರೇಯಸ್ ಅಯ್ಯರ್(28) ಉತ್ತಮ ಆಟವಾಡಿದರೆ. ಸುನೀಲ್ ನರೈನ್(6) ಹಾಗೂ ಶೆಲ್ಡರ್ ಜಾಕ್ಸನ್(7) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಆದರೆ ಒಂದೆಡೆ ವಿಕೆಟ್ ಬೀಳುತ್ತಿದ್ದರು ಜವಾಬ್ದಾರಿಯ ಆಟವಾಡಿದ ನಿತೀಶ್ ರಾಣ 54 ರನ್(36 ಬಾಲ್, 6 ಬೌಂಡರಿ, 2 ಸಿಕ್ಸ್) ಹಾಗೂ ಆಂಡ್ರೆ ರಸೆಲ್ 49* ರನ್(25 ಬಾಲ್, 4 ಬೌಂಡರಿ, 4 ಸಿಕ್ಸ್) ಮೂಲಕ ತಂಡಕ್ಕೆ ಆಸರೆಯಾದರು. ಜವಾಬ್ದಾರಿಯ ಆಟವಾಡಿದ ರಾಹುಲ್ ತ್ರಿಪಾಠಿ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದರೆ. ಇನ್ನಿಂಗ್ಸ್ ಕೊನೆವರೆಗೂ ಸ್ಪೋಟಕ ಆಟವಾಡಿದ ಆಂಡ್ರೆ ರಸೆಲ್, ಬೌಂಡರಿ, ಸಿಕ್ಸರ್ ಮೂಲಕ ತಂಡದ ಮೊತ್ತವನ್ನ ಹೆಚ್ಚಿಸಿದರು. ಸನ್ರೈಸರ್ಸ್ ಪರ ಟಿ. ನಟರಾಜನ್ (3/37), ಮಲ್ಲಿಕ್ (2/27) ವಿಕೆಟ್ ಪಡೆದರೆ. ಭುವನೇಶ್ವರ್, ಜಾನ್ಸನ್ ಹಾಗೂ ಸುಚಿತ್ ತಲಾ 1 ವಿಕೆಟ್ ಪಡೆದರು.