ಭಾರತ ಕಂಡ ಫಾಸ್ಟೆಸ್ಟ್ ಬೌಲರ್ ಯಾರು..? ಜಾವಗಲ್ ಶ್ರೀನಾಥ್, ಆಶೀಶ್ ನೇಹ್ರಾ, ಉಮೇಶ್ ಯಾದವ್, ಜಸ್ ಪ್ರಿತ್ ಬುಮ್ರಾ ಹೀಗೆ ಹಲವು ಹೆಸರುಗಳನ್ನು ಹೇಳಬಹುದು. ಆದರೆ ಓವರ್ನ ಆರೂ ಎಸೆತಗಳಲ್ಲೂ 145 ಕಿಲೋಮೀಟರ್ ವೇಗದಲ್ಲಿ ಎಸೆಯುವ ಬೌಲರ್ ಗಳು ಇವರಲ್ಲ. ಹೀಗಾಗಿ ಭಾರತದ ಬೌಲರ್ ಗಳನ್ನು ಫಾಸ್ಟ್ ಮೀಡಿಯಂ ಬೌಲರ್ ಗಳೆಂದು ಕರೆಯಲಾಗುತ್ತಿತ್ತು.
ಆದರೆ ಈ ಬಾರಿಯ ಐಪಿಎಲ್ನಲ್ಲಿ ಸೀನ್ ಬದಲಾಗಿದೆ. ಭಾರತೀಯ ಬೌಲರ್ ಒಬ್ಬ ಫಾಸ್ಟೆಸ್ಟ್ ಬೌಲರ್ ಆಗಿ ಮಿಂಚುತ್ತಿದ್ದಾರೆ. ಸನ್ ರೈಸರ್ಸ್ ಪರವಾಗಿ ಆಡುವ ಉಮ್ರನ್ ಮಲಿಕ್ ಎಲ್ಲಾ ಬೌಲರ್ಗಳಿಗಿಂತಲೂ ವೇಗಿವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಬೌಲರ್ ಗಳಿಗಿಂತಲೂ ಮಲಿಕ್ ವೇಗ ಹೊಂದಿದ್ದಾರೆ.
ಜಮ್ಮುಕಾಶ್ಮೀರ ಮೂಲದ ಈ ವೇಗದ ಬೌಲರ್ ನಿಧಾನಗತಿಯ ಎಸೆತಗಳನ್ನು ಹಾಕಿದ್ದೇ ಇಲ್ಲ. 150 ಕಿಲೋ ಮೀಟರ್ ವೇಗದ ಎಸೆತಗಳು ಎಷ್ಟಿವೆ ಅನ್ನುವುದಷ್ಟೇ ಲೆಕ್ಕ. ಅಚ್ಚರಿ ಅಂದರೆ 7 ಪಂದ್ಯಗಳಲ್ಲಿ ಉಮ್ರನ್ ಮಲಿಕ್ ಕೇವಲ 1.4 ಶೇಕಡಾದಷ್ಟು ಚೆಂಡನ್ನು ಮಾತ್ರ 120 ಕಿಲೋಮೀಟರ್ ವೇಗಕ್ಕಿಂತ ಕಡಿಮೆ ಹಾಕಿದ್ದಾರೆ. 120 ಮತ್ತು 129 ಕಿಲೋಮೀಟರ್ ವೇಗದ ಚೆಂಡುಗಳು ಕೂಡ 1.4 ಪ್ರತಿಶತ ಹೊಂದಿದ್ದಾರೆ. 130ರಿಂದ 139 ಕಿ.ಮೀ ವೇಗದ ಚೆಂಡುಗಳು ಕೇವಲ 6.4 ಶೇಕಡಾ ಮಾತ್ರ. 140ಕ್ಕಿಂತ ಹೆಚ್ಚಿನ ವೇಗದ ಚೆಂಡುಗಳು 90.8 ರಷ್ಟು ಇವೆ. ಹೀಗಾಗಿ ಉಮ್ರನ್ ಮಲಿಕ್ ಭಾರತದ ಫಾಸ್ಟೆಸ್ಟ್ ಬೌಲರ್ ಅನ್ನುವುದರಲ್ಲಿ ಎರಡು ಮಾತಿಲ್ಲ.