ಐಪಿಎಲ್ನಲ್ಲಿ ಎಲ್ಲವೂ ಲೆಕ್ಕ. ಸಿಕ್ಸರ್, ಬೌಂಡರಿಗಳಿಂದ ಹಿಡಿದು, ವಿಕೆಟ್ ತನಕ ಎಲ್ಲಕ್ಕೂ ಲೆಕ್ಕವಿರುತ್ತದೆ. ಈ ಬಾರಿಯ ಐಪಿಎಲ್ನಲ್ಲಿ ವೇಗದ ಬೌಲರ್ ಗಳ ಹೆಸರು ಕೂಡ ಓಡಾಡುತ್ತಿದೆ. ಆದರೆ 15ನೇ ಆವೃತ್ತಿಯಲ್ಲಿ ಫಾಸ್ಟೆಸ್ಟ್ ಬಾಲ್ ಎಸೆದಿದ್ದು ಭಾರತೀಯ ಬೌಲರ್..!
ಉಮ್ರಾನ್ ಮಲಿಕ್-153 ಕಿ.ಮೀ
ಸನ್ರೈಸರ್ಸ್ ಹೈದರಾಬಾದ್ ತಂಡದ ಉಮ್ರನ್ ಮಲಿಕ್ ಐಪಿಎಲ್ 15ನೇ ಆವೃತ್ತಿಯ ಫಾಸ್ಟೆಸ್ಟ್ ಬೌಲರ್. ಜಮ್ಮು ಮತ್ತು ಕಾಶ್ಮೀರ ಮೂಲದ ಉಮ್ರಾನ್ ಮಲಿಕ್, ನಿಯಮಿತವಾಗಿ 150 ಕೀ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧ 153 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿರುವುದು ಈ ಬಾರಿಯ ಅತ್ಯಂತ ವೇಗದ ಎಸೆತ.
ಲೊಕಿ ಫರ್ಗ್ಯೂಸನ್- 150 ಕಿ.ಮೀ
ನ್ಯೂಜಿಲೆಂಡ್ನ ಲೊಕಿ ಫರ್ಗ್ಯೂಸನ್ ಈ ಬಾರಿಯ ಐಪಿಎಲ್ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯುವ ಪರ್ಗ್ಯೂಸನ್ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ. ಇದು ಈ ಬಾರಿಯ ಎರಡನೇ ವೇಗದ ಎಸೆತ.
ನವದೀಪ್ ಸೈನಿ- 149 ಕಿ.ಮೀ
ನವದೀಪ್ ಸೈನಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಸೈನಿ ಈ ಬಾರಿ ಆಡಿರುವ ಎರಡು ಪಂದ್ಯಗಳಲ್ಲಿ ಮೂರು ವಿಕೆಟ್ ಕಬಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೈನಿ 149 ಕಿ.ಮೀ ವೇಗದಲ್ಲಿ ಬೌಲ್ ಮಾಡಿದ್ದರು.
ಓಡಿಯನ್ ಸ್ಮಿತ್-148.8 ಕಿ.ಮೀ
ಪಂಜಾಬ್ ಕಿಂಗ್ಸ್ ಆಲ್ರೌಂಡರ್ ಒಡಿನ್ ಸ್ಮಿತ್ ಬೌಲಿಂಗ್ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿದ್ದಾರೆ. ವಿಂಡೀಸ್ ಆಲ್ರೌಂಡರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 148.8 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು.
ಕಮಲೇಶ್ ನಾಗರಕೋಟಿ-145.9
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫಾಸ್ಟ್ ಬೌಲರ್, ಕಮಲೇಶ್ ನಾಗರ್ ಕೋಟಿ ಮುಂಬೈ ಇಂಡಿಯನ್ಸ್ ವಿರುದ್ಧ 145.8 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು.