ತಾರಾ ಶಟ್ಲರ್ಗಳಾದ ಪಿ.ವಿ.ಸಿಂಧು ಮತ್ತು ಎಚ್.ಎಸ್.ಪ್ರಣಯ್ ಇಂದಿನಿಂದ ಆರಂಭವಾಗಲಿರುವ ಬಿಡಬ್ಲ್ಯುಎಫ್ ಸುದೀರ್ಮನ್ ಕಪ್ಗೆ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯುತ್ತಿದ್ದಾರೆ.
ಚೀನಾದ ಸೂಜೌನಲ್ಲಿ ಪ್ರತಿಷ್ಠಿತ ಟೂರ್ನಿ ನಡೆಯಲಿದೆ.
ಟೀಮ್ ಚಾಂಪಿಯನ್ಶಿಪ್ ವಿಭಾಗದಲ್ಲಿ ಭಾರತ ತಂಡ ಯಾವಗಲೂ ಸಿಂಗಲ್ಸ್ ಆಟಗಾರರನ್ನು ನೆಚ್ಚಿಕೊಂಡಿದೆ. ವಿಶ್ವ ಮಿಶ್ರ ತಂಡ ಚಾಂಪಿಯನ್ಶಿಪ್ನಲ್ಲಿ ಭಾರತ ಚೊಚ್ಚಲ ಪದಕ ಗೆಲ್ಲಲು ಪಣ ತೊಟ್ಟಿದೆ.
ಥಾಮಸ್ ಕಪ್ ಗೆಲುವಿನಿಂದ ಸೂರ್ತಿ ಪಡೆದಿರುವ ಭಾರತ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ , ತ್ರೀಸಾ ಜಾಲಿ ಹಾಗೂ ಗಾಯತ್ರಿ ಗೋಪಿಚಂದ್ ಅವರುಗಳನ್ನು ನೆಚ್ಚಿಕೊಂಡಿದೆ.
ಸಿ ಗುಂಪಿನ ಸ್ಥಾನದಲ್ಲಿರುವ ಭಾರತ, ಮಲೇಷ್ಯಾ, ಚೈನೀಸ್ ಥೈಪೈ ಮತ್ತು ಆಸ್ಟ್ರೇಲಿಯಾ ಜತೆ ಸೆಣಸಲಿದೆ. ಈ ಗುಂಪಿನಲ್ಲಿ ಅಗ್ರ ಎರಡು ತಂಡಗಳು ನಾಕೌಟ್ ಹಂತವನ್ನು ಪ್ರವೇಶಿಸಲಿವೆ.