ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ನಡುವಿನ ಪಂದ್ಯದ ರಣತಂತ್ರ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಎರಡೂ ತಂಡಗಳು ಸ್ಟಾರ್ ಬ್ಯಾಟ್ಸ್ಮನ್ ಗಳನ್ನು ಕಟ್ಟಿಹಾಕಲು ಪ್ಲಾನ್ ಮಾಡಿವೆ.
ಬೌಲರ್ಗಳ ರಣತಂತ್ರ:
ಎಸ್ಆರ್ಎಚ್ ಮತ್ತು ಆರ್ಸಿಬಿ ಬೌಲರ್ಗಳು ಬ್ಯಾಟ್ಸ್ ಮನ್ಗಳನ್ನು ಕಟ್ಟಿಹಾಕಲು ಪ್ಲಾನ್ ಮಾಡಿದ್ದಾರೆ. ಸನ್ ರೈಸರ್ಸ್ ವಿರಾಟ್ ಕೊಹ್ಲಿಯನ್ನು ಕಟ್ಟಿಹಾಕಲು ಅಸ್ತ್ರವಿಟ್ಟುಕೊಟ್ಟಿದೆ. ಭುವನೇಶ್ವರ್ ಕುಮಾರ್ ಕೊಹ್ಲಿಯನ್ನು 3 ಬಾರಿ ಔಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಭುವಿ ಎದುರು ಕೊಹ್ಲಿ ಕೇವಲ 121ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ನಟರಾಜನ್ ಒಂದು ಬಾರಿ ಕೊಹ್ಲಿಯನ್ನು ಔಟ್ ಮಾಡಿದರೂ ಹೆಚ್ಚು ರನ್ ಕೊಟ್ಟಿಲ್ಲ.
ಕೊಹ್ಲಿ ಮಾರ್ಕೋ ಜನ್ಸೆನ್ರ 7 ಎಸೆತವನ್ನು ಮಾತ್ರ ಎದುರಿಸಿದ್ದರೆ, ಮಲಿಕ್ ವಿರುದ್ಧ ಆಡಿಯೇ ಇಲ್ಲ. ಈ ಬಾರಿಯ ಐಪಿಎಲ್ನಲ್ಲಿ ವೇಗಿಗಳು ಕೊಹ್ಲಿಯನ್ನು ಹೆಚ್ಚು ತೊಂದರೆಗೀಡುಮಾಡಿದ್ದಾರೆ ಅನ್ನುವುದನ್ನು ಮರೆಯುವ ಹಾಗಿಲ್ಲ.
ವಿಲಿಯಮ್ಸನ್ ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್ವುಡ್, ಮೊಹಮ್ಮದ್ ಸಿರಾಜ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ರನ್ನು ಔಟ್ ಮಾಡಿದ್ದಾರೆ. ಹರ್ಷಲ್ ಮತ್ತು ಹ್ಯಾಜಲ್ ವುಡ್ ವಿರುದ್ಧ ವಿಲಿಯಮ್ಸನ್ ಪರದಾಡಿದ್ದಾರೆ. ಹೀಗಾಗಿ ಹ್ಯಾಜಲ್ ವುಡ್ ಮತ್ತು ಹರ್ಷಲ್ ಹೊಸ ಚೆಂಡು ಹಂಚಿಕೊಳ್ಳಬಹುದು.
ಸಿರಾಜ್ ಮತ್ತು ಮ್ಯಾಕ್ಸ್ವೆಲ್ ವಿಲಿಯಮ್ಸನ್ಗೆ ರನ್ ಕೊಟ್ಟರೂ ತಲಾ ಎರಡು ಬಾರಿ ಔಟ್ ಮಾಡಿದ್ದಾರೆ.
ನಂಬರ್ ಗೇಮ್:
- ಆರ್ಸಿಬಿ ತಂಡಕ್ಕೆ ಶಹಬಾಸ್ ಆಪತ್ಭಾಂಧವನಾಗಿದ್ದಾರೆ. ತಂಡ 62 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಪರದಾಡುತ್ತಿದ್ದಾಗ 3ಬಾರಿ, 42 ರನ್ಗೆ 3 ವಿಕೆಟ್ ಕಲೆದುಕೊಂಡಿದ್ದಾಗ ಒಮ್ಮೆ ಹಾಗೂ 75 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಕಣಕ್ಕಿಳಿದು ಆಡಿದ್ದಾರೆ. ಟೂರ್ನಿಯಲ್ಲಿ 171 ರನ್ಗಳಿಸುವ ಜೊತೆಗೆ 147ರ ಸ್ಟ್ರೈಕ್ ರೇಟ್ ಕೂಡ ಹೊಂದಿದ್ದಾರೆ.
- ರಾಹುಲ್ ತ್ರಿಪಾಠಿ ಮತ್ತು ಏಡಿಯನ್ ಮಾರ್ಕ್ ರಾಂ ಜೋಡಿ 121ರ ಸರಾಸರಿಯಲ್ಲಿ 242 ರನ್ ಕಲೆಹಾಕಿದೆ. ಅಷ್ಟೇ ಅಲ್ಲ ವೇಗಿಗಳ ಎದುರು 186 ಸ್ಟ್ರೈಕ್ ರೇಟ್ ಹೊಂದಿದೆ. ಸನ್ ರೈಸರ್ಸ್ ತಂಡದ ಉಳಿದ ಆಟಗಾರರು 21.5 ಸರಾಸರಿಯಲ್ಲಿ 344 ನ್ ಮಾತ್ರಗಳಿಸಿದ್ದಾರೆ.
- ಪವರ್ ಪ್ಲೇನಲ್ಲಿ ಸನ್ ರೈಸರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಒದ್ದಾಡಿದೆ. ಎಸ್ಆರ್ಎಚ್ ಪವರ್ ಪ್ಲೇನಲ್ಲಿ 6.1 ರನ್ ರೇಟ್ ಹೊಂದಿದ್ದರೆ, ಆರ್ಸಿಬಿ 6.8 ರನ್ ರೇಟ್ ಹೊಂದಿದೆ.
- ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಈ ಬಾರಿ ಸ್ಪಿನ್ನರ್ ಗಳ ಎದುರು ಚೆನ್ನಾಗಿ ಆಡಿದ್ದಾರೆ. ವೇಗಿಗಳ ಎದುರು 121ರ ಸ್ಟ್ರೈಕ್ ರೇಟ್ ಹಾಗೂ 5 ಬಾರಿ ಔಟಾಗಿದ್ದಾರೆ. ಆದರೆ ಸ್ಪಿನ್ನರ್ ಗಳ ಎದುರು 149 ಸ್ಟ್ರೈಕ್ ರೇಟ್ ಹಾಗೂ ಕೇವಲ ಎರಡು ಬಾರಿ ಮಾತ್ರ ಔಟಾಗಿದ್ದಾರೆ.