ಶ್ರೀಲಂಕಾ ತಂಡದ ಮಾಜಿ ನಾಯಕ ಆ್ಯಂಜಿಲೊ ಮ್ಯಾಥ್ಯೂಸ್ ಟೆಸ್ಟ್ ಕ್ರಿಕೆಟ್ನಲ್ಲಿ 7 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ ಲಂಕಾ ತಂಡದ ಮೂರನೆ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಕ್ರೈಸ್ಟ್ ಚರ್ಚ್ನಲ್ಲಿ ಆರಂಭವಾಗಿರುವ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮ್ಯಾಥ್ಯೂಸ್ 98 ಎಸೆತದಲ್ಲಿ 47 ರನ್ ಹೊಡೆದು ತಂಡದ ಮಾಜಿ ನಾಯಕ ಸನತ್ ಜಯಸೂರ್ಯ ಅವರನ್ನು ರನ್ ಗಳಿಕೆಯಲ್ಲಿ ಹಿಂದಿಕ್ಕಿದರು.
ಕುಶಾಲ್ ಮೆಂಡೀಸ್ ಔಟ್ ಆಗುತ್ತಿದ್ದಂತೆ ನಾಲ್ಕನೆ ಕ್ರಮಾಂಕದಲ್ಲಿ ಬಂದ ಮ್ಯೂಥ್ಯೂಸ್ ಬೌಂಡರಿ ಮತ್ತು ಸಿಕ್ಸರ್ ಹೊಡೆದು ಟೆಸ್ಟ್ ಕ್ರಿಕಟ್ನಲ್ಲಿ 7 ಸಾವಿರ ರನ್ ಪೂರೈಸಿದರು. ಈ ಹಿಂದೆ ತಂಡದ ಮಾಜಿ ನಾಯಕರಾದ ಕುಮಾರ ಸಂಗಕ್ಕಾರ ಮತ್ತು ಮಹೇಲಾ ಜಯ ವರ್ಧನೆ ಟೆಸ್ಟ್ ನಲ್ಲಿ 7 ಸಾವಿರ ರನ್ ಪೂರೈಸಿದ್ದರು.
ಮ್ಯಾಥ್ಯೂಸ್ ಡ್ಯಾರಿಲ್ ಮಿಚೆಲ್ಗೆ ಕ್ಯಾಚ್ ನೀಡಿ ಹೊರ ನಡೆದರು.