ಮಧ್ಯಮ ಕ್ರಮಾಂಕದ ಆಟಗಾರ ಶ್ರೀಕಾರ್ ಭಾರತ್ (ಅಜೇಯ 70) ಇವರ ಉತ್ತಮ ಆಟದ ನೆರವಿನಿಂದ ಟೀಮ್ ಇಂಡಿಯಾ ಲೀಸೆಸ್ಟರ್ ನಲ್ಲಿ ನಡೆಯುತ್ತಿರುವ ಅಭ್ಯಾಸ್ ಪಂದ್ಯದಲ್ಲಿ ಲೀಸೆಸ್ಟರ್‌ಶೈರ್ ವಿರುದ್ಧ ಮೊದಲ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಗೆ 246 ರನ್ ಕಲೆ ಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಭ್ಮನ್ ಗಿಲ್ ಜೊತೆಗೂಡಿ 9.2 ಓವರ್ ಗಳಲ್ಲಿ 35 ರನ್ ಸೇರಿಸಿತು. ಗಿಲ್ 21 ರನ್ ಸೇರಿಸಿದ್ದಾಗ ಡೇವಿಸ್ ಗೆ ವಿಕೆಟ್ ಒಪ್ಪಿಸಿದರು. ನಾಯಕ ರೋಹಿತ್ ಶರ್ಮಾ 3 ಔಂಡರಿ ಸೇರಿದಂತೆ 25 ರನ್ ಬಾರಿಸಿ ಪೆವಿಲಿಯನ್ ಸೇರಿದರು.
ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಹನುಮ ವಿಹಾರಿ 3 ರನ್ ಗಳಿಗೆ ಆಟ ಮುಗಿಸಿದರು. ಶ್ರೇಯಸ್ ಅಯ್ಯರ್ ಸೊನ್ನೆ ಸುತ್ತಿದರು.

ವಿರಾಟ್ ಕೊಹ್ಲಿ 69 ಎಸೆತಗಳನ್ನು ಎದುರಿಸಿ ರನ್ ಕಲೆ ಹಾಕುವ ಭರವಸೆ ಮೂಡಿಸಿದ್ದರು. ಆದರೆ 33 ರನ್ನಸೇರಿಸಿದ್ದಾಗ ವಾಕರ್ ತೋಡಿದ ಖೆಡ್ಡಾಗೆ ಬಲಿಯಾದರು.

ಐದನೇ ವಿಕೆಟ್ ಗೆ ರವೀಂದ್ರ ಜಡೇಜಾ ಹಾಗೂ ಭರತ್ 57 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ಜಡೇಜಾ 13 ರನ್ ಬಾರಿಸಿ ಔಟ್ ಆದರು.
ವೇಗದ ಬೌಲರ್ ಉಮೇಶ್ ಯಾದವ್ 4 ಬೌಂಡರಿ ಸೇರಿದಂತೆ 23 ರನ್ ಬಾರಿಸಿದರು.

ಮೊಹಮ್ಮದ್ ಶಮಿ ಅಜೇಯ 18 ರನ್ ಬಾರಿಸಿದ್ದಾರೆ. ಶ್ರೀಕರ್ ಭರತ್ 111 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 70 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.