15ನೇ ಆವೃತ್ತಿಯ ಐಪಿಎಲ್ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದ್ರಾಬಾದ್ ತಂಡಗಳು ಟೂರ್ನಿಯ 36ನೇ ಪಂದ್ಯದಲ್ಲಿ ಬಲಿಷ್ಠ ಮುಖಾಮುಖಿಗೆ ಸಜ್ಜಾಗಿವೆ.
ಮುಂಬೈನ ಬ್ರಬೋರ್ನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯಕ್ಕಾಗಿ ಎರಡು ತಂಡಗಳು ಭರ್ಜರಿ ಸಿದ್ಧತೆ ಮಾಡಿಕೊಂಡಿವೆ. ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಗೆಲುವಿನ ನಿರೀಕ್ಷೆಯೊಂದಿಗೆ ಕಣಕ್ಕಿಳಿಯುತ್ತಿರುವ ಎರಡು ತಂಡಗಳು ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ.
ಟೂರ್ನಿಯಲ್ಲಿ ನೀರಸ ಆರಂಭ ಕಂಡಿದ್ದ ಸನ್ರೈಸರ್ಸ್, ನಂತರದ ನಾಲ್ಕು ಪಂದ್ಯಗಳನ್ನು ಸತತ ಗೆಲುವು ಸಾಧಿಸಿ ಭರ್ಜರಿ ಕಮ್ ಬ್ಯಾಕ್ ಮಾಡಿದೆ. ಹೀಗಾಗಿ ಆರ್ಸಿಬಿ ವಿರುದ್ಧವೂ ತನ್ನ ಗೆಲುವಿನ ಓಟ ಮುಂದುವರಿಸುವ ನಿರೀಕ್ಷೆಯಲ್ಲಿದೆ. ಆಡಿರುವ 6 ಪಂದ್ಯಗಳಲ್ಲಿ 4 ಗೆಲುವು, 2 ಸೋಲಿನೊಂದಿಗೆ 8 ಪಾಯಿಂಟ್ಸ್ನೊಂದಿಗೆ 5ನೇ ಸ್ಥಾನದಲ್ಲಿದೆ.
ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹ ಐಪಿಎಲ್ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತಿದೆ. ಚೆನ್ನೈ ವಿರುದ್ಧದ ಸೋಲಿನ ನಂತರ ಕಮ್ ಬ್ಯಾಕ್ ಮಾಡಿದ ಬೆಂಗಳೂರು ಸಹ ಕಳೆದೆರಡು ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಈವರೆಗೂ ಆಡಿರುವ 7 ಪಂದ್ಯಗಳಲ್ಲಿ 5 ಗೆಲುವು 2 ಸೋಲಿನೊಂದಿಗೆ 10 ಪಾಯಿಂಟ್ಸ್ ಪಡೆದು 3ನೇ ಸ್ಥಾನದಲ್ಲಿದೆ.
ಉಭಯ ತಂಡಗಳು:
*ರಾಯಲ್ ಚಾಲೆಂಜರ್ಸ್ ಬೆಂಗಳೂರು*: ಅನುಜ್ ರಾವತ್, ಫಾಫ್ ಡುಪ್ಲೆಸ್ಸಿ(ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಸುಯಾಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮೆದ್, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ವನಿಂದು ಹಸರಂಗ, ಜೋಶ್ ಹೇಜಲ್ವುಡ್, ಮೊಹಮ್ಮದ್ ಸಿರಾಜ್
*ಸನ್ರೈಸರ್ಸ್ ಹೈದ್ರಾಬಾದ್*: ಅಭಿಷೇಶ್ ಶರ್ಮ, ಕೇನ್ ವಿಲಿಯಂಸನ್(ನಾಯಕ), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಂ, ನಿಕೋಲಸ್ ಪೂರನ್, ಶಶಾಂಕ್ ಸಿಂಗ್, ಜೆ.ಸುಚಿತ್, ಮಾರ್ಕೊ ಜಾನ್ಸನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲ್ಲಿಕ್, ಟಿ. ನಟರಾಜನ್